Vijaypura

ನಾಲ್ಕು ಮಕ್ಕಳ ಜಲಸಮಾಧಿ: ತಾಯಿಯ ವಿರುದ್ಧ ಮರ್ಡರ್ ಕೇಸ್

Share

ಮಕ್ಕಳ ಸಮೇತ ತಾಯಿ ಆತ್ಮಹತ್ಯೆಗೆ ಯತ್ನ ಹಾಗೂ ನಾಲ್ಕು ಮಕ್ಕಳ ಜಲಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ‌‌ ವಿರುದ್ದ ಪ್ರಕರಣ ದಾಖಲಾಗಿದೆ. ಮಕ್ಕಳ ಸಮೇತ ಕೆನಾಲ್ ಗೆ ಹಾರಿದ್ದ ತಾಯಿ ಭಾಗ್ಯಶ್ರೀ ವಿರುದ್ಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಭಾಗ್ಯಶ್ರೀ ವಿರುದ್ಧ ಮರ್ಡರ್ ಕೇಸ್ ದಾಖಲಾಗಿದೆ. ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಪ್ರತ್ಯಕ್ಷದರ್ಶಿ ಫಾರೆಸ್ಟ್ ಗಾರ್ಡ್ ನಾಗೇಶ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಭಾಗ್ಯಶ್ರೀಯು ಕಳೆದ ದಿನಾಂಕ 13 ರಂದು ನಿಡಗುಂದಿ ಬಳಿಯ ಎಡದಂಡೆ ಕಾಲುವೆಗೆ ಹಾರಿದ್ದಳು. ಎರಡೂ ಹೆಣ್ಣು, ಎರಡೂ ಗಂಡು ಮಕ್ಕಳ ಸಮೇತ ಕೆನಾಲ್ ಹಾರಿದ್ದಳು. ಗಂಡ ಬೈಕ್ ಗೆ ಪೆಟ್ರೋಲ್ ತರಲು ಹೋದಾಗ ಕೆನಾಲ್ ಗೆ ಹಾರಿದ್ದ ಪರಿಣಾಮ ಘಟನೆಯಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದವು. ಮಕ್ಕಳ ಸಾವಿಗೆ ಕಾರಣಳಾದ ತಾಯಿ ಭಾಗ್ಯಶ್ರೀ ವಿರುದ್ಧ ಮರ್ಡರ್ ಕೇಸ್ ದಾಖಲಾಗಿದೆ.

Tags:

error: Content is protected !!