Hukkeri

ಹುಕ್ಕೇರಿ ಕ್ಯಾರಗುಡ್ಡದ ಮಲ್ಲೇಶ್ವರ ಮಹಾರಾಜರ ವರ್ಧಂತಿ ಕಾರ್ಯಕ್ರಮ – ಮಂಜುನಾಥ ಮಹಾರಾಜರು.

Share

ಜನೇವರಿ 14 ರಂದು ಹುಕ್ಕೇರಿ ಕ್ಯಾರಗುಡ್ಡದ ಅವುಜಿಕರ ಧ್ಯಾನಯೋಗಾಶ್ರಮದ ಅಧೀಪತಿಗಳಾದ ಸಮರ್ಥ ಸದ್ಗುರು ಮಲ್ಲೇಶ್ವರ ಮಹಾರಾಜರ 59 ನೇ ಹುಟ್ಟು ಹಬ್ಬದ ವರ್ಧಂತಿ ಮಹೋತ್ಸವ ಹಮ್ಮಿಕೋಳ್ಳಲಾಗಿದೆ ಎಂದು ಅಭಿನವ ನಂಜುನಾಥ ಮಹಾರಾಜರು ಹೇಳಿದರು.

ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮಂಗಳವಾರ ದಿನಾಂಕ 14 ರಂದು ಇಂಚಗೇರಿ ಮಠದ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಸಾನಿಧ್ಯದಲ್ಲಿ ಮತ್ತು ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಹಾಗೂ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಮಲ್ಲೇಶ್ವರ ಮಹಾರಾಜರ ವರ್ಧಂತಿ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ ಕಾರಣ ಇಂಚಿಗೇರಿ ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಶಿವಾನಂದ ಮುಡಶಿ, ಕೆ ಬಿ ಬಡಿಗೇರ ,ಬಿ ಆರ್ ಮಜ್ಜಿಗಿ, ಪಿ ಜಿ ಕೋಣ್ಣೂರ, ತ್ರೀಷಾ ಕೋಣ್ಣೂರ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!