ದಿವಂಗತ ಅಪ್ಪಗೌಡರು ಸ್ಥಾಪಿಸಿದ ಕೈಗಾರಿಕಾ ಮತ್ತು ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧೀಕಾರಿ ಭೀಮಾಶಂಕರ ಗುಳೆದ ಹೇಳಿದರು .
ಸಂಕೇಶ್ವರ ನಗರದ ಶ್ರೀ ದುರುದುಂಡಿಶ್ವರ ವಿಧ್ಯಾವರ್ಧಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಸಂಭ್ರಮ ಉಡಾನ ಕಾರ್ಯಕ್ರಮವನ್ನು ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನ್ಯಾಯವಾದಿ ಆರ್ ಬಿ ಪಾಟೀಲ ದೀಪ ಬೆಳಗಿಸಿ ಚಾಲನೆ ನೀಡಿದರು.
ಎ ಬಿ ಪಾಟೀಲ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎಮ್ ಎಸ್ ಕಾಮತ್ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.
ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ದಿವಂಗತರಾದ ಅಪ್ಪಣಗೌಡ ಪಾಟೀಲ ಮತ್ತು ಬಸಗೌಡ ಪಾಟೀಲ ಇವರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೆದ ಸಹಕಾರಿ ಮಹರ್ಷಿ ಅಪ್ಪಣಗೌಡ ಪಾಟೀಲರು ಮತ್ತು ಕಾಯಕಯೋಗಿ ಬಸಗೌಡ ಪಾಟೀಲರು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಮತ್ತು ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ , ಯುವಕರಿಗೆ ಉದ್ಯೋಗ ನೀಡುವ ಮೂಲಕ ಇಡೆ ದೇಶಕ್ಕೆ ಮಾದರಿಯಾಗಿದ್ದಾರೆ ಅದನ್ನು ಮಾಜಿ ಸಚಿವರಾದ ಎ ಬಿ ಪಾಟೀಲರು ಮುಂದು ವರೆಸಿಕೊಂಡು ಸುಮಾರು 26 ವಿಭಾಗಗಳನ್ನು ಪ್ರಾರಂಭಿಸಿ ಉನ್ನತ ಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಅವರ ಕಾರ್ಯ ಶ್ಲಾಘನೀಯ ಎಂದರು .
ವೇದಿಕೆ ಮೇಲೆ ಮಾಜಿ ಹೋಂ ಗಾರ್ಡ ಅಧೀಕ್ಷಕ ಅರವಿಂದ ಘಂಟಿ, ಎಸ್ ಡಿ ವಿ ಎಸ್ ಸಂಘದ ನಿರ್ದೆಶಕರಾದ ಬಿ ಎಸ್ ವೈರಾಗಿ, ಜಿ ಸಿ ಕೋಟಗಿ, ಎಸ್ ಎಮ್ ಪಾಟೀಲ, ಡಾ, ಎನ್ ಪಿ ಹಾವಳ, ಆಡಳಿತಾಧಿಕಾರಿ ಡಾ, ಬಿ ಎ ಪೂಜಾರಿ, ಉಡಾನ ಕೋ ಆಡಿನೇಟರ ಸಂತೋಷ ಪಾಟೀಲ, ವಿಕ್ರಂ ಕರನಿಂಗ,ಗಣೇಶ ಪಾಟೀಲ ಉಪಸ್ಥಿತರಿದ್ದರು.
ಸಿ ಬಿ ಎಸ್ ಸಿ ಶಾಲೆಯ ಪ್ರಾಚಾರ್ಯ ಎಮ್ ಎಸ್ ಕಾಮತ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕಳೆದ ಮೂರು ದಿನಗಳಿಂದ ಸಂಘದ ಅದ್ಯಕ್ಷ ಎ ಬಿ ಪಾಟೀಲರ ಮಾರ್ಗದರ್ಶನದಲ್ಲಿ ಜರಗುತ್ತಿರುವ ಉಡಾನ ಸಾಂಸ್ಕೃತಿಕ ಸಂಭ್ರಮವು ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಇದಕ್ಕೆ ಸಹಕರಿಸಿದ ಆಡಳಿತ ಮಂಡಳಿ ಸದಸ್ಯರು,ಶಿಕ್ಷಕರು ಮತ್ತು ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಮೆಚ್ಚುಗೆಯನ್ನು ಪಡೆದಿದ್ದಾರೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಪಾಲಕರು ಹೇಚ್ವಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.