Bailahongala

ಬೈಲಹೊಂಗಲ: ಹೃದಯಾಘಾತದಿಂದ ಸಾವನ್ನಪ್ಪಿದ ಯೋಧನ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

Share

ಶ್ರೀನಗರದಲ್ಲಿ ಕರ್ತವ್ಯದಲ್ಲಿದ್ದಾಗಲೇ ವೀರಯೋಧ ಮಹಾಂತೇಶ್ ಬೈರನಟ್ಟಿ ಹೃದಯಘಾತದಿಂದ ವೀರ ಮರಣ ಹೊಂದಿದ್ದು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ವೀರ ಯೋಧ ಮಹಾಂತೇಶ್ ಬೈರನಟ್ಟಿ ಭಾರತೀಯ ಸೇನೆಯ ಶ್ರೀನಗರದ SSB 10ನೇ ಬಟಾಲಿಯನದಲ್ಲಿ ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಶ್ರೀನಗರದಲ್ಲಿ ಕರ್ತವ್ಯದಲ್ಲಿ ಇರುವಾಗಲೇ ಹೃದಯಾಘಾತವಾಗಿ ವೀರ ಮರಣ ಹೊಂದಿರುತ್ತಾರೆ. ಮಹಾಂತೇಶ್ ಬೈರನಟ್ಟಿ ಯವರು ಪತ್ನಿ ಲಕ್ಷ್ಮಿ ಮತ್ತು ಮೂವರು ಮುದ್ದಾದ ಮಕ್ಕಳನ್ನು ಹೊಂದಿದ್ದಾರೆ. ಹೆಂಡತಿ ಮಕ್ಕಳನ್ನು ತಮ್ಮ ಹುಟ್ಟೂರಾದ ತಿಗಡಿ ಗ್ರಾಮದಲ್ಲಿ ಕುಟುಂಬದವರೊಂದಿಗೆ ಬಿಟ್ಟು ದೇಶ ಸೇವೆಗಾಗಿ ಸೇನೆಗೆ ಸೇರಿದ್ದರು. ಮಹಾಂತೇಶ್ ಅವರು ಕರ್ತವ್ಯದಲ್ಲಿ ಇರುವಾಗಲೇ ಹೃದಯಾಘಾತ ಆಗಿರುವ ಸುದ್ದಿಯನ್ನು ತಿಳಿದು ಇಡೀ ಗ್ರಾಮವೇ ದುಃಖದಲ್ಲಿ ಮುಳುಗಿ ಹೋಗಿದೆ.

ವೀರ ಮರಣ ಹೊಂದಿರುವ ಮಹಾಂತೇಶ್ ಬೆರನಟ್ಟಿ ಪಾರ್ಥಿವ ಶರೀರವನ್ನು ಇವತ್ತು ಯೋಧನ ಹುಟ್ಟುರಾದ ತಿಗಡಿ ಗ್ರಾಮಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ತರಲಾಯಿತು ತಿಗಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಶಾಸಕ ಬಾಬಾಸಾಹೇಬ್ ಪಾಟೀಲ್ ಮತ್ತು ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ ಮತ್ತು ಬೈಲಹೊಂಗಲ ಎ.ಸಿ. ಪ್ರಭಾವತಿ ಪಕೀರಪೂರ ಬೈಲಹೊಂಗಲ ತಹಸಿಲ್ದಾರ H ಶಿರಹಟ್ಟಿ ಹಾಗೂ ತಿಗಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಲ್ಪನಾ ಡೊಂಕ್ಕನ್ನವರ ಗ್ರಾಮದ ಲೆಕ್ಕಾಧಿಕಾರಿಗಳಾದ ಛತ್ರಪತಿ ನಾಯಕ ಹಾಗೂ ಮಾಜಿ ಸೈನಿಕರ ಬಳಗ ಸೇರಿತ್ತು ಸಕಲ ಸರ್ಕಾರಿ ಗೌರವದೊಂದಿಗೆ ವೀರಯೋಧ ಮಹಾಂತೇಶ ಬೈರನಟ್ಟಿಯವರ ಅಂತ್ಯ ಸಂಸ್ಕಾರ ನೆರವೇರಿತು.

ವರದಿಗಾರರು
ಶಾನೂಲ ಮತ್ತೆಖಾನ
ಬೈಲಹೊಂಗಲ

 

Tags:

error: Content is protected !!