ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಸಂಘಟನೆಯ ಅಧ್ಯಕ್ಷರು ಹಾಗೂ ಸದಸ್ಯರ ಚುನಾವಣೆ ಜರುಗಿತು ಈ ನಿಮಿತ್ಯವಾಗಿ ಕಾಗವಾಡ ಮತ್ತು ಅಥಣಿ ತಾಲೂಕಿನ 500 ಜೈನ ಸಮಾಜ ಸದಸ್ಯರು ಅಥಣಿಯಲ್ಲಿ ಮತ ಚಲಾಯಿಸಿದರು.
ರವಿವಾರರಂದು ಅಥಣಿಯ ಸಂಕೋನಟ್ಟಿ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ಮತದಾನ ಪ್ರಕ್ರಿಯೆ ನೆರವೇರಿತು. ಜಿಲ್ಲಾ ಸದಸ್ಯರ ಸ್ಥಾನಕ್ಕಾಗಿ ಹಿರಿಯ ನಿವೃತ್ ಅಭಿಯಂತರದ ಅರುಣ್ ಎಲಗುದ್ರಿ, ಹಾಗೂ ಉಗಾರದ ಪದ್ಮಾವತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶೀತಲ್ ಪಾಟೀಲ್ ಇವರ ಮಧ್ಯದಲ್ಲಿ ಚುನಾವಣೆ ಜರುಗಿತು.
ಇದೇ ರೀತಿ ರಾಜ್ಯದ ಉಪಾಧ್ಯಕ್ಷ ಸ್ಥಾನಕ್ಕಾಗಿ ಪದ್ಮಾವತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶೀತಲ್ ಪಾಟೀಲ್ ಮತ್ತು ಅಥಣಿಯ ಎ ಸಿ ಪಾಟೀಲ್ ಇವರ ಮಧ್ಯದಲ್ಲಿ ಚುನಾವಣೆ ಜರಿಗಿತ್ತು, ಶೀತಲ್ ಪಾಟೀಲ್ ಎರಡು ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಚುನಾವಣೆ ಪ್ರಕ್ರಿ ಶಾಂತಿಯುತವಾಗಿ ನೆರವೇರಿತು.
ಇಬ್ಬರು ಅಭ್ಯರ್ಥಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಸುಕುಮಾರ್ ಬನ್ನೂರೆ
ಏನ ನ್ಯೂಸ್ ಕಾಗವಾಡ