ಕಾಗವಾಡ – ಐನಾಪುರದ ಶ್ರೀ ಪದ್ಮಾವತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಪಟ್ಟಣ ಪಂಚಾಯತಿ ಸದಸ್ಯರಾದ ಸಂಜಯ್ ಕುಚುನೂರೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿದ ನಿಮಿತ್ಯವಾಗಿ ಐನಾಪುರ್ ಶಿರಹಟ್ಟಿ ಶೀಡಬಾಳ ಗ್ರಾಮದ ಶ್ರೀ ಪದ್ಮಾವತಿ ಪಾದಯಾತ್ರೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ರವಿವಾರರಂದು ನಿವೃತ್ತ ಅರಣ್ಯ ಅಧಿಕಾರಿಗಳಾದ ಅಶೋಕ್ ಚೊಗುಲಾ ಇವರ ನಿವಾಸದಲ್ಲಿ ಅವರ ಹಸ್ತೆಯಿಂದ ಸನ್ಮಾನಿಸಲಾಯಿತು.
ನ್ಯಾಯವಾದಿ ಸಂಜಯ್ ಕುಚನೂರೆ ಇವರು ಈ ಮೊದಲು ಪದ್ಮಾವತಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಅವರು ಒಳ್ಳೆಯ ಸೇವೆ ಕಂಡು ಎಲ್ಲ ನಿರ್ದೇಶಕರು ಅಧಿಕಾರಿಗಳು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದರಿಂದ ಸಂಸ್ಥೆಯ ಬೆಳವಣಿಗೆಗೆ ಒಳ್ಳೆ ಸಹಾಯ ಆಗಲಿದೆ ಎಂದು ನಿವೃತ್ತ ಅರಣ್ಯ ಅಧಿಕಾರಿ ಅಶೋಕ್ ಚೌಗುಲಾ ಹೇಳಿದರು
ಈ ಕಾರ್ಯಕ್ರಮದಲ್ಲಿ ಹಿರಿಯರಾದ ಶಿರಹಟ್ಟಿ ಗ್ರಾಮದ ಮಿಲಿಂದ್ ಪಾಟೀಲ್, ರಾಜು ನಂದೇಶ್ವರ, ಮಹಾವೀರ ತೀರ್ಥ್, ಐನಾಪುರದ ಆರ್ ಬಿ ಬಸಣ್ಣವರ್, ಸಂತೋಷ್ ಪಾಟೀಲ್, ಯಶವಂತ್ ಪಾಟೀಲ್, ಅನ್ನ ಸಾಹೇಬ ಲಿಂಬಿಕಾಯಿ, ಭರತೇಶ್ ಪಾಟೀಲ್, ರಾಹುಲ ಪಾಟಿಲ್, ಬಾಹುಬಲಿ ಕುಸುನಾಳೆ, ಶೇಡ್ಬಾಳ ಪಟ್ಟಣದ ಅಮಿತ್ ಪಾಟೀಲ್, ಶೀತಲ್ ಇರಾಜ, ಶುಭಂ ಪಾಟೀಲ್ ಸೇರಿದಂತೆ ಅನೇಕರು ಇದ್ದರು.
ಸುಕುಮಾರ್ ಬನ್ನೂರೆ
ಇನ್ನ ನ್ಯೂಸ್ ಕಾಗವಾಡ