Banglore

ಸಿ.ಟಿ. ರವಿ ತಕ್ಷಣ ಬಿಡುಗಡೆಗೆ ಹೈಕೋರ್ಟ್ ಆದೇಶ…

Share

ಬಿಜೆಪಿ ಎಂಎಲ್‌ಸಿ ಸಿಟಿ ರವಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್‌ನಲ್ಲೇ ಅಶ್ಲೀಲ ಶಬ್ದ ಬಳಸಿದ್ದಾರೆ ಎನ್ನಲಾದ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದ ಸಿಟಿ ರವಿಗೆ ಹೈಕೆೋರ್ಟ್ ರಿಲೀಫ್ ನೀಡಿದೆ.

ಇಂದು ಹೈಕೋರ್ಟ್‌ನಲ್ಲಿ ಇಂದು ಸಿಟಿ ರವಿ ಕೇಸ್‌ನಲ್ಲಿ ತೀವ್ರ ವಾದ ಪ್ರತಿವಾದ ನಡೆಯಿತು. ಸಿಟಿ ರವಿ ಮೇಲಿನ ಎಫ್‌ಐಆರ್ ತಡೆಗೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಸ್ಟಿಸ್ ಎಂ ಜಿ ಉಮಾ ಪೀಠದ ಮುಂದೆ ಅರ್ಜಿ ವಿಚಾರಣೆ ನಡೆಯಿತು. ಸುದೀರ್ಘ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಸಿಟಿ ರವಿ ವಿಚಾರಣೆಗೆ ಸಹಕರಿಸುವಂತೆ ಷರತ್ತು ವಿಧಿಸಿ ಬಿಡುಗಡೆಗೆ ಆದೇಶ ನೀಡಿದೆ. ಎಲ್ಲಿದ್ದಾರೋ ಅಲ್ಲೇ ರಿಲೀಸ್ ಮಾಡಿ ಅಂತ ಹೈಕೋರ್ಟ್ ಆದೇಶಿಸಿದೆ.

Tags:

error: Content is protected !!