Chikkodi

ಬೀರೇಶ್ವರ ಸಂಸ್ಥೆಗೆ ಡಾ.ಅಜಯ್ ನಾಗಭೂಷಣ IAS ಭೇಟಿ

Share

ಚಿಕ್ಕೋಡಿ:ಯಕ್ಸಂಬಾ ಪಟ್ಟಣದ ಪ್ರತಿಷ್ಠಿತ ಜೊಲ್ಲೆ ಗ್ರೂಪ್ ನ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಕೂ ಆಫ್ ಕ್ರೆಡಿಟ್ ಸೊಸಾಯಿಟಿ ಲೀ.,(ಬಹು -ರಾಜ್ಯ) ಸಂಸ್ಥೆಗೆ ಕರ್ನಾಟಕ ಸರ್ಕಾರ ಸಹಕಾರ ಸಚಿವಾಲಯದ ಕಾರ್ಯದರ್ಶಿಗಳಾದ=ಡಾ.ಅಜಯ್ ನಾಗಭೂಷಣ IAS , ಅವರು ಸೌಹಾರ್ದಯುತವಾಗಿ ಭೇಟಿ ನೀಡಿದಾಗ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ, ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಅವರನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು ಸತ್ಕರಿಸಿದರು.

ಬಳಿಕ ಜ್ಯೋತಿ ಬಜಾರ,ಹಾಗೂ ಜ್ಯೋತಿ ಸಂಸ್ಥೆಗೆ ಭೇಟಿ ನೀಡಿ ಎಲ್ಲ ಸಂಸ್ಥೆಗಳನ್ನು ವೀಕ್ಷಿಸಿ,ಇಂತಹ ಸಣ್ಣ ಪಟ್ಟಣದಲ್ಲಿ ಪ್ರಾರಂಭಿಸಿದ ಸಂಸ್ಥೆಯು ಕರ್ನಾಟಕ,ಮಹಾರಾಷ್ಟ್ರ, ಹಾಗೂ ಗೋವಾ ರಾಜ್ಯದಲ್ಲಿ ತಮ್ಮ ಶಾಖೆಗಳನ್ನು ಪ್ರಾರಂಭಿಸಿದ್ದು ಹೆಮ್ಮೆಯ ಸಂಗತಿ.ಬೀರೇಶ್ವರ ಸಂಸ್ಥೆಯು ಠೇವು ಹಾಗೂ ಸಾಲ ಸೇರಿ 70000 ಕೋಟಿ ಅಧಿಕ ಮೊತ್ತದ ವ್ಯವಹಾರ ನಡೆಸುತ್ತಿರುವುದು ಸಂತಸದ ಸಂಗತಿ ಎಂದು ಡಾ.ಅಜಯ ನಾಗಭೂಷಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ,ಅಪ್ಪಾಸಾಹೇಬ ಜೊಲ್ಲೆ,ಲಕ್ಷ್ಮಣ ಕಬಾಡೆ, ಯಾಸಿನ್ ತಾಂಬೂಳೆ,ಪ್ರದಾನ ವ್ಯವಸ್ಥಾಪಕರಾದ ಬಹುದ್ದೂರ ಗುರವ,ಉಪಪ್ರಧಾನ ವ್ಯವಸ್ಥಾಪಕರು, ಸಂಸ್ಥೆಯ ಪದಾಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:

error: Content is protected !!