ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಧಾರವಾಡದಲ್ಲಿ, ನೂರಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಪ್ರತಿಭಟನೆ ಮೆರವಣಿಗೆ ಮಾಡುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ನಗರದ ಜುಬ್ಲಿ ವೃತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡಸಿ ಸರ್ಕಾರದ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕನಿಷ್ಠ ವೇತನ ನಿಗದಿ ಪಡಿಸಿದರು ಕೆಲವು ಕಾರ್ಮಿಕರಿಗೆ ಕನಿಷ್ಠ ವೇತನ ಕಂಪನಿಗಳು ನೀಡುತ್ತಿಲ್ಲ. ಅಸಂಘಟಿತ ಕಾರ್ಮಿಕರಾದ ಕಟ್ಟಡ ನಿರ್ಮಾಣಕಾರರು, ಅಟೋ ಚಾಲಕರು ಸೇರಿದಂತೆ ಅನೇಕ ಅಸಂಘಟಿತ ಕಾರ್ಮಿಕರು ಬದುಕು ಸಂಕಷ್ಟದಲ್ಲಿದೆ. ಶ್ರಮಿಕ ವರ್ಗ ಇದ್ದಾಗಿದ್ದು, ಈ ಕೂಡಲೇ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಮಾಡಬೇಕು. ಕೇಂದ್ರದ ಕಾರ್ಮಿಕ ಸಂಹಿತೆಗಳನ್ನು ರಾಜ್ಯ ಸರಕಾರ ಜಾರಿಮಾಡಬೇಕು.
ಗ್ರಾಮ ಪಂಚಾಯತ ನೌಕರರಿಗೆ ಕನಿಷ್ಟ ವೇತನ ನೀಡಲು ಅಗತ್ಯ ಹಣವನ್ನು ಬಿಡುಗಡೆ, ಇಎಫ್ ಎಂಎಸ್ಗೆ ಬಾಕಿ ಇರುವವರನ್ನು ಸೇರ್ಪಡೆ ಮಾಡಲು, ಅರ್ಹರಿಗೆ ಅನುಮೋದನೆ ನೀಡಬೇಕು. ಬಿಸಿಯೂಟ ನೌಕರರ ಗೌರವಧನ ಹೆಚ್ಚಿಸಲು, ಈಗಾಗಲೇ ಹೇಳಿದಂತೆ ನಿವೃತ್ತಿ ಪರಿಹಾರ ಕೂಡಲೇ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕುಎಂದು ಆಗ್ರಹಿಸಿದರು. ನಮ್ಮ ಬೇಡಿಕೆಗಳಿಗೆ ಸರ್ಕಾರ ಎಲ್ಲಿವರೆಗೆ ಮಾನ್ಯತೆ ನೀಡುವುದಿಲ್ಲ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಖಡಕ್ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ.