ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟದ ವೇಳೆ ಲಾಠಿ ಚಾರ್ಜ್ ಖಂಡಿಸಿ ಪ್ರತಿಭಟನೆ ನಡೆಯಿತು. ವಿಜಯಪುರದಲ್ಲು ಪಂಚಮಸಾಲಿ ಹೋರಾಟ ನಡೆದಿದೆ. ಹೋರಾಟದ ವೇಳೆ ಯಡವಟ್ಟು ಆಗಿದೆ. ಬೆಂಕಿಯಿಂದ ಕೊಂಚದ್ರಲ್ಲೆ ಪ್ರತಿಭಟನಾಕಾರ ಬಚಾವ್ ಆಗಿರುವ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪೆಟ್ರೋಲ್ ಸುರಿದು ಪ್ರತಿಕೃತಿಗೆ ಬೆಂಕಿ ಹಚ್ಚುವ ವೇಳೆ ಕಾರ್ಯಕರ್ತನಿಗು ಬೆಂಕಿ ತಗುಲಿದೆ.
ಲಾಠಿ ಚಾರ್ಜ್ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಮಾನವ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಪೆಟ್ರೋಲ್ ಸುರಿಯುವಾಗ ಯಡವಟ್ಟು ಆಗಿದೆ. ಅಲ್ಲೆ ಇದ್ದ ಕಾರ್ಯಕರ್ತನ ಕಾಲು, ಕೈಗೆ ಬೆಂಕಿ ತಗುಲಿದೆ. ಏಕಾಏಕಿ ಪೆಟ್ರೋಲ್ ಸುರಿದ ಪರಿಣಾಮ ಬೆಂಕಿ ತಗುಲಿದೆ. ಅದೃಷ್ಟವಶಾತ್ ಯಾವುದೆ ಅನಾಹುತ ಸಂಭವಿಸಿಲ್ಲಾ.