Dharwad

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಧಾರವಾಡದಲ್ಲಿ ಆಕ್ರೋಶ…

Share

ಬೆಳಗಾವಿ ಸುವರ್ಣ ಸೌಧದ ಎದುರು ಪಂಚಮಸಾಲಿ ಶ್ರೀ ಬಸವ ಜಯ ಮೃತ್ಯುಂಜಯ ನೇತೃತ್ವದಲ್ಲಿ ನಡೆದಿದ್ದ ಮೀಸಲಾತಿ ಹೋರಾಟದ ವೇಳೆ ಹೋರಾಟಗಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ನಡೆ ಖಂಡಿಸಿ ಹಾಗೂ ಹೋರಾಟಗಾರರ ಮೇಲೆ ಹಾಕಿರುವ ಕೇಸ್ ಸೇರಿ ಸಿಎಂರವರು ಪಂಚಮಸಾಲಿಗಳ ಕ್ಷಮೆ ಕೋರಲು ಆಗ್ರಹಿಸಿ, ಧಾರವಾಡದಲ್ಲಿ ಪಂಚಮಸಾಲಿ ಸಮುದಾಯವರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟದಲ್ಲಿ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಭಾಗವಹಿಸಿ ಸರ್ಕಾರದ ನಡೆ ಖಂಡಿಸಿದರು.

ನಗರದ ಹೃದಯ ಭಾಗದ ಜುಬ್ಲಿ ವೃತದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಂಚಮಸಾಲಿ ಲಿಂಗಾಯತರು, ಧಾರವಾಡ ಜಿಲ್ಲಾ ಲಿಂಗಾಯತ ಪಂಚಸಾಲಿ ವಕೀಲ ಪರಿಷತ್ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ಪೊಲೀಸ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಪಂಚಮಸಾಲಿ ಲಿಂಗಾಯತ ಸ್ವಾಮೀಜಿಯು ಕೂಡಾ ರಸ್ತೆ ತಡೆಯಲ್ಲಿ ಭಾಗವಹಿಸಿ ಸರ್ಕಾರದ ನಡೆಗೆ ಅಸಮಧಾನ ಹೊರಹಾಕಿದರು. ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ, ಪಂಚಮಸಾಲಿ 2 ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತಿತ್ತು‌. ಆದರೇ ಈ ವೇಳೆ ಪೊಲೀಸರು ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ‌ ಹೋರಾಟ ಹತಿಕ್ಕುವ ಹುನ್ನಾರ ಮಾಡಿದ್ದಾರೆ.

ಲಾಠಿ ಚಾರ್ಜ್ ವೇಳೆ ನೂರಾರು ಹೋರಾಟಗಾರಿಗೆ ಗಂಭೀರಗಾಯವಾಗಿವೆ. ಇಷ್ಟೇಲ್ಲ ಅನಾಹುತಗಳ ನಡೆಯಲು ಮುಖ್ಯಂಮತ್ರಿ ಸಿದ್ದರಾಮಯ್ಯನವರೇ ನೇರಕಾರಣರಾಗಿದ್ದಾರೆ. ಈ ಕೂಡಲೇ ಸಿಎಂ ಅವರು ನಮ್ಮ ಸಮುದಾಯದ ಪಂಚಮಸಾಲಿ ಸ್ವಾಮೀಜಿಗಳಿಘೆ ಕ್ಷಮೆ ಕೇಳಬೇಕು, ಲಾಠಿ ಚಾರ್ಜ್ ಮಾಡಿದ. ಅಧಿಕಾರಿಗಳ ಮೇಲೆ ಶಿಶ್ತು ಕ್ರಮ ಕೈಗೊಳಬೇಕು. ಜತೆಗೆ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಇನ್ನೂ ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಜಯ ಮೃತ್ಯುಂಜಯ ಸ್ವಾಮಿಗಳು, ಪಂಚಮಸಾಲಿ ಸಮುದಾಯ ಯಾವತ್ತೂ ಸಮುದಾಯ ವಿರೋಧಿ ಹೇಳಿಕೆ ನೀಡಿಲ್ಲ, ಸಿಎಂರವರು ಸಂವಿಧಾನ ವಿರೋಧಿ ಹೇಳಿಕೆ ನಾವು ನೀಡಿದ್ದಾರೆ ಎಂದು ಹೇಳುವ ಮೂಲಕ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ನಾವು ಕೂಡಾ ಸಂವಿಧಾನ ಅಡಿಯಲ್ಲಿ ನಮ್ಮ ಹೋರಾಟ ಮಾಡುತ್ತಿದ್ದೇವೆ. ಸಂವಿಧಾನದ ಓದಿಕೊಂಡೇ ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ ಎನ್ನುವ ಮೂಲಕ ಸಿಎಂ ಅವರಿಗೆ ಟಾಂಗ್ ನೀಡಿ, ನಮ್ಮ ಹೋರಾಟ ನಿಲ್ಲವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

 

Tags:

error: Content is protected !!