Dharwad

ಹು-ಧಾ ಕಮಿಷನರ್ ಎನ್ ಶಶಿಕುಮಾರ ಅವರಿಂದ ಧಾರವಾಡ ಸಿಟಿ ರೌಂಡ್ಸ್….ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸನ್ಮಾನ…

Share

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಪರಾಧ ತಡೆ ಸೇರಿ ಪಬ್ಲಿಕ್ ಫ್ರೆಂಡ್ಲಿ ಪೊಲೀಸ್ ವಾತಾವಾರಣ ನಿರ್ಮಿಸುವ ನಿಟ್ಟಿನಲ್ಲಿ, ಕಮಿಷನರ್ ಎನ್ ಶಶಿಕುಮಾರವರು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದು, ಅದರ ಮುಂದುವರೆದ ಭಾಗವಾಗಿ ಧಾರವಾಡ ವಿವಿಧ ಪ್ರದೇಶಗಳಿಗೆ ಬೈಕ್ ಏರಿ ಭೇಟಿ ನೀಡುವುದರ ಜತೆಗೆ ಸಾರ್ಜನಿಕರಿಂದ ಅಹವಾಲು ಸ್ವೀಕರಿಸಿದರು.

ಹೌದು ಹುಬ್ಬಳ್ಳಿ ಧಾರವಾಡ ಕಮಿಷನರ್ ಆಗಿ ಎನ್ ಶಶಿಕುಮಾರವರು ಅಧಿಕರವಹಿಸಿಕೊಂಡ ನಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗೋ ಕ್ರಮಿನಲ್‌ಗಳಿಗೆ ಈಗಾಗಲೇ ನಡುಕ ಹುಟ್ಟಿಸಿದ್ದಾರೆ. ಇದರ ಜತೆಗೆ ಮುಂದುವರೆದ ಭಾಗವಾಗಿ ಪಬ್ಲಿಕ್ ಪ್ರೆಂಡ್ಲಿ ಪೊಲೀಸ್ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಬುಧವಾರ ತಡ ರಾತ್ರಿ ಧಾರವಾಡದಲ್ಲಿ ಪೊಲೀಸ ಕಮಿಷನರ್ ಎನ್ ಶಶಿಕುಮಾರವರು ಉಪನಗರ ಪೊಲೀಸ್ ಠಾಣೆ ವ್ಯಾಪ್ತಿ ಸೇರಿ ಕಮಿಷನರೆಟ್ ವ್ಯಾಪ್ತಿಯ ವಿದ್ಯಾಕಾಶಿ ನಗರದಲ್ಲಿ ಬೈಕ್ ಮೂಲಕ ಸಿಟಿ ರೌಂಡ್ಸ್ ಹೊಡೆದರು.

ಈ ವೇಳೆ ಕೆಲವು ನಗರದ ನಿವಾಸಿಗಳು ಕಮಿಷನರ್ ಮುಂದೆ ತಮ್ಮ ಅಳಲು ಅಹ್ವಾಲುಗಳನ್ನು ನೀಡಿದರು. ಇದಕ್ಕೂ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮದಲ್ಲಿ ಭಾಗವಿಸಿದ ಕಮಿಷನ ಎನ್ ಶಶಿಕುಮಾರ ಸೇರಿ ಡಿಸಿಪಿ ನಂದಗಾವಿ ಅವರಿಗೆ ಸಾರ್ವಜನಿಕರು ಸನ್ಮಾನಿ ಗೌರವಿಸಿದರು.

 

Tags:

error: Content is protected !!