Chikkodi

ಕಬ್ಬಿನ ಗದ್ದೆಯಲ್ಲಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

Share

ಚಿಕ್ಕೋಡಿ: ತಾಲ್ಲೂಕಿನ ಉಮರಾಣಿ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.

ಉಮರಾಣಿ ಗ್ರಾಮದ ಶ್ರೀಮಂತ ರಾಮಾ ಇಟ್ನಾಳೆ (40) ಕೊಲೆಯಾದ ವ್ಯಕ್ತಿ. ಗ್ರಾಮದ ಸಿದ್ದಪ್ಪ ಇಟ್ನಾಳೆ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಶವ ಪತ್ತೆಯಾಗಿದ್ದು, ಸೊಂಟಕ್ಕೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿರುವುದು ಎಂದು ಗೊತ್ತಾಗಿದೆ.

ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಲು ಹನಿ ನೀರಾವರಿಗಾಗಿ ಅಳವಡಿಸಿದ ಡ್ರಿಪ್ ಪೈಪ್ ತೆರವು ಮಾಡಲು ಹೋಗಿದ್ದಾಗ ದುರ್ವಾಸನೆ ಬಂದಿದೆ. ಸಮೀಪ ಹೋಗಿ ನೋಡಿದಾಗ ಶ್ರೀಮಂತ ಇಟ್ನಾಳೆ ಶವವಾಗಿ ಬಿದ್ದಿದ್ದನ್ನು ತೋಟದ ಮಾಲೀಕರು ಗುರುತಿಸಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಚಿಕ್ಕೋಡಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ವಿಶ್ವನಾಥ ಚೌಗುಲಾ, ಚಿಕ್ಕೋಡಿ ಠಾಣೆ ಪಿಎಸ್‌ಐ ಬಸಗೌಡ ನೇರ್ಲಿ ಭೇಟಿ ನೀಡಿ ಪರಿಶೀಲಿಸಿದರು. ಕೊಲೆಗೆ ಕಾರಣ ಗೊತ್ತಾಗಿಲ್ಲ.

ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಯವಿಟ್ಟು ಗ್ರಾಫಿಕ್ಸ್ ಇಮೇಜ್ ಬಳಸಿಕೊಳ್ಳಿ

Tags:

error: Content is protected !!