hubbali

ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ನಿಧನಕ್ಕೆ ಸಂಸದ ಜಗದೀಶ ಶೆಟ್ಟರ ಸಂತಾಪ

Share

ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಎಸ್‌.ಎಂ. ಕೃಷ್ಣ(92) ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖಭರಿತನಾಗಿರುವೆ ಎಂದು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ ಅವರು ತಿಳಿಸಿದ್ದಾರೆ.

ಶ್ರೀ ಎಸ್.ಎಮ್ ಕೃಷ್ಣಾ ಹಾಗೂ ತಮ್ಮ ಪರಿಚಯ ತುಂಬಾ ಕಾಲದ್ದು, ಅವರ ಸರಳತೆಯ ಸ್ವಭಾವ, ಸಜ್ಜನಿಕೆಯ ಗುಣಗಳು ನನಗೆ ಬಹಳ ಇಷ್ಟವಾಗಿದ್ದವು. ಯಾವುದೇ ಒಂದು ಬಿಕಟ್ಟಿನ ಸಮಸ್ಯೆಯನ್ನು ಅತ್ಯಂತ ಚಾಣಾಕ್ಷತನದಿಂದ ಬಗೆಹರಿಸುವ ಶಕ್ತಿ ಅವರಲ್ಲಿತ್ತು ಎಂದರೆ ತಪ್ಪಾಗಲಾರದು. ಅವರ ಮುಖ್ಯಮಂತ್ರಿ ಅವಧಿಯಲ್ಲಿ ರಾಜ್ಯವು ಐಟಿ-ಬಿಟಿ ಕ್ಷೇತ್ರದಲ್ಲಿ ಅತ್ಯಂತ ಗಣನೀಯ ಬೆಳವಣಿಗೆ ಸಾಧಿಸಿದೆ.

ಅವರ ಸಾವಿನಿಂದ ದೇಶವು ಒಬ್ಬ ಮುತ್ಸದಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ಮೃತರ ಕುಟುಂಬಕ್ಕೆ ಸಾಂತ್ವನವನ್ನು ತಿಳಿಸುತ್ತಾ, ಅಗಲಿದ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಸಂಸದರಾದ ಶ್ರೀ ಜಗದೀಶ ಶೆಟ್ಟರ ಅವರು ತಿಳಿಸಿದ್ದಾರೆ.

Tags:

error: Content is protected !!