ಚಿಕ್ಕೋಡಿ ಯಕ್ಷಂಬಾ-ದಾನವಾಡ ರಸ್ತೆ, ಕಾಮಗಾರಿಗೆ 2 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಹಾಗೂ ವಿ.ಪ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ಯಕ್ಷಂಬಾ-ದಾನವಾಡ ರಸ್ತೆ ಮಾರ್ಗದ ಗಣೇಶ ಮಂದಿರದ ಹತ್ತಿರ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಈ ವಿಷಯ ತಿಳಿಸಿದರು. ಈ ಮಾರ್ಗದಲ್ಲಿ ಸಂಚರಿಸುವ ರೈತರು, ಗ್ರಾಮಸ್ಥರು ನನಗೆ ಹಾಗೂ ಶಾಸಕ ಗಣೇಶ ಹುಕ್ಕೇರಿವರಿಗೆ ಈ ರಸ್ತೆ ದುರಸ್ತಿ ಮಾಡುವಂತೆ ಗಮನಕ್ಕೆ ತಂದಾಗ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿಯವರಿಗೆ ಭೇಟಿಯಾಗಿ ರಸ್ತೆ ದುರಸ್ತಿ ಬಗ್ಗೆ ಗಮನಕ್ಕೆ ತಂದಿದ್ದೆವು. ಈ ಹಿನ್ನೆಲೆಯಲ್ಲಿ 2 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಸುನೀಲ ಸಪ್ತಸಾಗರೆ, ಪಂಕಜ ಪವಾರ,ವಿನೋದ ಚಿತಳಿ, ರಾಜೇಂದ್ರ ಕರಾಳೆ, ಮಾರುತಿ ಮಾನೆ, ಸುಭಾಷ ಕಲ್ಯಾಣಿ, ಗಜಾನನ ಹುಕ್ಕೇರಿ, ಮಾರುತಿ ಹವಾಲ್ದಾರ,ಸಂಜು ದೇಸಾಯಿ, ಅಜೀತ ಗಿರಗಾಂವೆ, ರಾಜು ಬಾಗೇವಾಡಿ, ಅಜೀತ ಮತ್ತು ರೋಹಿತ ಸಾತ್ವರ, ಕಿರಣ ಕೇಸೆ, ಗಜು ಕಾಡಾಪುರೆ, ಗುತ್ತಿಗೆದಾರ ರವಿ ಮಾಳಿ, ಪಟ್ಟಣ ಪಂಚಾಯತ ಸರ್ವ ಸದಸ್ಯರು ರೈತರು ಮುಂತಾದವರು ಉಪಸ್ಥಿತರಿದ್ದರು.