Chikkodi

ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನದ ಕೊರತೆ:ಶಾಸಕ ದುರ್ಯೋಧನ ಐಹೊಳೆ

Share

ಚಿಕ್ಕೋಡಿ: ‘ಸದ್ಯದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೇಳಿಕೊಳ್ಳುವಂತಹ ಅನುದಾನ ಬಿಡುಗಡೆ ಆಗದೇ ಇದ್ದರೂ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಳಿದಿದ್ದ ಕಾಮಗಾರಿಗಳನ್ನೇ ಮಂಜೂರು ಮಾಡಿಸಿಕೊಂಡು ರಾಯಭಾಗ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿರುವೆ’ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಚಿಕ್ಕೋಡಿ ತಾ ಲ್ಲೂಕಿನ ವಿವಿಧ ಗ್ರಾಮಗಳ ಎಸ್ಟಿ ಕಾಲೊನಿಗಳಲ್ಲಿ ಸಿ.ಸಿ ರಸ್ತೆ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಕೂಡಲೇ ಕರಗಾಂವ ಏತ ನೀರಾವರಿ ಯೋಜನೆಗೆ ಮರು ಟೆಂಡ‌ರ್ ಕರೆದು, ಮತ್ತೊಮ್ಮೆ ಭೂಮಿಪೂಜೆ ನೆರವೇರಿಸಿ ಈ ಭಾಗವನ್ನು ಹಸಿರು ಮಾಡಬೇಕು. ರೈತರು ಆರ್ಥಿಕವಾಗಿ ಏಳೆ ಹೊಂದಬೇಕೆಂಬ ಕನಸು ನನ್ನದು’ ಎಂದರು.

ಬೆಳಗಲಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿಯ ₹ 20ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಮಮದಾಪೂರ ಕೆ.ಕೆ., ಬೆಳಕೂಡ, ಉಮರಾಣಿ, ಪೊಗತ್ಯಾನಹಟ್ಟಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ ₹ 5ಲಕ್ಷ ವೆಚ್ಚದಲ್ಲಿ ಎಸ್ಪಿ ಕಾಲೊನಿಗಳಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಹಿರಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಸುರೇಶ ಬೆಲ್ಲದ, ಉಮರಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಪೂಜೇರಿ, ಮಲ್ಲೇಶ ಹನುಮಂತಗೋಳ, ರಬಸಿದ್ದ ವಡೇರಹಟ್ಟಿ, ಪರಸಪ್ಪ ಹನುಮನ್ನವರ, ಲಂಕೇಶ ಹನುಮನ್ನವರ, ಲಗಮಪ್ಪ ಮಸಗುಪ್ಪಿ, ಶಿವರಾಜ ಬುಡಸ, ಶಿವಾನಂದ ಪಾಟೀಲ, ಬಸಲಿಂಗ ಕಾಡೇಶಗೋಳ, ಮಹಾದೇವ ಜಿವಣಿ, ಅರುಣ ಮರ್ಯಾಯಿ, ಸಿದ್ದಪ್ಪ ಈಟಿ, ಕಲ್ಲಪ್ಪ ಪಾಶ್ವಾಪೂರೆ, ನಿಜಾಮ ಪೆಂಡಾರಿ, ಬಸವರಾಜ ಬೆಕ್ಕೇರಿ, ನಾರಾಯಣ ನರಗುಂದೆ, ರಾಜು ಜಿಡ್ಡಿಮನಿ ಇದ್ದರು.

Tags:

error: Content is protected !!