ವಿಕಲಚೇತನರಿಗೆ ಅವರದೇ ಹಕ್ಕು ಮತ್ತು ಕರ್ತವ್ಯಗಳಿವೆ, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಪಿಡಿ ಸಂಸ್ಥೆ ಸಹ ನಿರ್ದೇಶಕರಾದ ರಮೇಶ ಗೋಂಗಡಿ ವಿಶೇಷಚೇತನರಿಗೆ ಕರೆ ನೀಡಿದರು.
ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಧಾರವಾಡದ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನದಲ್ಲಿ ವಿಶೇಷಚೇತನರಿಗೆ ಆಯೋಜಿಸಿದ್ದ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬೆನ್ನುಹುರಿ ಅಪಘಾತಕ್ಕೆ ಒಳಗಾದ ಫಲಾನುಭವಿಗೆ ಎಪಿಡಿ ಸಂಸ್ಥೆ ಹಾಗೂ ಆರೂಡ ಸಂಸ್ಥೆವತಿಯಿಂದ ಒದಗಿಸಿದ ವಿಲಚೇರ್‌ನ್ನು ಪಲಾನುಭವಿಗೆ ವಿತರಿಸಿ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು ಆರು ಲಕ್ಷ ವಿಷೇಶ ಚೇತನರಿಗೆ ನಮ್ಮ ಸಂಸ್ಥೆ ನೆರವಾಗಿದೆ. ಇನ್ನು ಹಲವಾರು ವಿಷೇಶ ಚೇತನರನ್ನು ಗುರುತಿಸಿ ಅವರ ಕಷ್ಟಕ್ಕೆ ಸ್ಪಂದನೆ ನೀಡುವ ಉದ್ದೇಶ ಇದೆ ಎಂದರು.
ಜತೆಗೆ ಇದೇವೇಳೆ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಆರೂಡ ಸಂಸ್ಥೆ ವಿಶೇಷ ಮಕ್ಕಳು ಮತ್ತು ವಿಕಲಚೇತನರು ಕೇಕ್ ಕತ್ತರಿಸಿ ಸಿಹಿ ಹಂಚಿದರು. ಈ ಸಂದರ್ಭದಲ್ಲಿ ಎಪಿಡಿ ಸಂಸ್ಥೆ ಅರ್ಚನಾ, ಸೌಮ್ಯ, ವನ್ನೂರುಸ್ವಾಮಿ, ಆರೂಡ ಸಂಸ್ಥೆ ಮುಖ್ಯಸ್ಥರಾದ ನಾಗರಾಜ, ಗೀತಾ ಸೇರಿದಂತೆ ಅನೇಕಗಣ್ಯ ಮಾನ್ಯರು ಉಪಸ್ಥಿತರಿದ್ದರು.