ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ತಹಶೀಲ್ದಾರ ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಪ್ರಕಾಶ ಗಾಯಕವಾಡ ಇವರ ಮೇಲೆ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀ. ಭೀಮಪ್ಪ ಗಡಾದ ಇವರು ಖಾನಾಪೂರ ತಾಲೂಕಿನ ಜಾಂಬೋಟಿ ಹೋಬಳಿಯಲ್ಲಿ ಬರುವ ಹುಳಂದ ಗ್ರಾಮದಲ್ಲಿರುವ ಸರ್ವೆ ನಂಬರ 3ರಲ್ಲಿ 508ಎಕರೆ-20ಗುಂಟೆ ಜಮೀನಿನ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ್ದಾರೆಂದು ಗಂಭೀರವಾದ ಆರೋಪವನ್ನು ಮಾಡಿರುತ್ತಾರೆ.
ಈ ಕುರಿತು ದಿನಪತ್ರಿಕೆಯಲ್ಲಿ ನ್ಯೂಸ್ ಚಾನಲ್ ಗಳಲ್ಲಿ ಸುದ್ದಿ ಸಹ ಪ್ರಕಟಗೊಂಡಿರುತ್ತದೆ. ಆದ್ದರಿಂದ ನಮಗೆ ಖಾನಾಪೂರ ತಹಶೀಲ್ದಾರ ಮೇಲೆ ಇನ್ನೂ ಹಲವಾರು ರೀತಿಯ ಬೆನಾಮಿ ಆಸ್ತಿ ವಿಚಾರ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಕಾರಣ ಸದರಿ . ಪ್ರಕಾಶ ಗಾಯಕವಾಡ ಇವರು ಸೇವೆಗೆ ಸೇರ್ಪಡೆ ಆಗುವ ಮುಂಚೆ ಹಾಗೂ ಸೇವೆಗೆ ಸೇರಿದ ನಂತರ ಅವರ ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿಗೆ ಇರತಕ್ಕ ಜಮೀನುಗಳ ಕುರಿತು ಸಂಪೂರ್ಣ ತನಿಖೆ ಮಾಡಬೇಕು ಅದರಂತೆ ಪ್ರಕಾಶ ಗಾಯಕವಾಡ ಮತ್ತು ಅವರ ಕುಟುಂಬದವರ ಹೆಸರಿಗೆ ಬೆಳಗಾವಿ ತಾಲೂಕಾ, ಖಾನಾಪೂರ ತಾಲೂಕಾ, ಹಳಿಯಾಳ ತಾಲೂಕಾ ಮತ್ತು ಇನ್ನಿತರ ತಾಲೂಕುಗಳಲ್ಲಿ ಅವರ ಹೆಸರಿನ ಮೇಲೆ ಜಮೀನುಗಳು ಇದೆ ಅಂತಾ ಸಾರ್ವಜನಿಕರಿಂದ ಕೇಳಿ ಬಂದಿದೆ.
ಅದು ಅಲ್ಲದೇ ನಮ್ಮ ಹತ್ತಿರ ಲಭ್ಯವಿರುವ ದಾಖಲೆಗಳ ಪಹಣಿ ಪತ್ರಿಕೆಗಳು ಬೆಳಗಾವಿ ತಾಲೂಕಾ, ಉಚಗಾಂಚ ಹೋಬಳಿ, ಕಲ್ಲೇಹೋಳ ಗ್ರಾಮದ ಸರ್ವೆ ನಂಬರ 260/7, 199/2, ಮತ್ತು ಖಾನಾಪೂರ ತಾಲೂಕಿನ ಜಾಂಬೋಟಿ ಹೋಬಳಿಯಲ್ಲಿ ಬರುವ ಹಬ್ಬಾನಟ್ಟಿ ಗ್ರಾಮದ ಸರ್ವೆ ನಂಬರ, 15/5, ರಲ್ಲಿಯೂ ಕೂಡ ಅವರ ಕುಟುಂಬದವರ ಹೆಸರಿನಲ್ಲಿ ಜಮೀನುಗಳನ್ನು ಹೊಂದಿರುತ್ತಾರೆ.
ಆದ್ದರಿಂದ ಸದರಿ ಖಾನಾಪೂರ ತಹಶೀಲ್ದಾರರಾದ. ಪ್ರಕಾಶ ಗಾಯಕವಾಡ ಇವರು ಸೇವೆಗೆ ಸೇರ್ಪಡೆ ಆಗುವ ಮುಂಚೆ ಹಾಗೂ ಸೇವೆಗೆ ಸೇರಿದ ನಂತರ ಅವರ ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿಗೆ ಇರತಕ್ಕ ಜಮೀನುಗಳ ಕುರಿತು ಸಂಪೂರ್ಣ ತನಿಖೆ ಮಾಡಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಮಾಜ್ ಸೇವಕ ವಿವೇಕ್ ತಡಕೋಡ ಮನವಿ ಸಲ್ಲಿಸಿದಾರೆ.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ