Accident

ಅಂಬಿಕಾ ನಗರದಲ್ಲಿ ತಪ್ಪಿದ ಬಾರಿ ದುರಂತ : ಮೂರು ಕಾರುಗಳಿಗೆ ಡಿಕ್ಕಿ ಹೊಡೆದ ಲಾರಿ ಚಾಲಕ

Share

ಹುಬ್ಬಳ್ಳಿಯ ಅಂಬಿಕಾ ನಗರದಲ್ಲಿ ಲಾರಿ ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿ ಮೂರು ಕಾರುಗಳಿಗೆ ಅಪಘಾತ ಮಾಡಿ ಪರಾರಿಯಾದ ಘಟನೆ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಷ್ಟೇ ನಡೆದಿದೆ.

ಕ್ಯಾಂಟರ್ ವಾಹನದಲ್ಲಿ ಮಿನಿ ಹಿಟ್ಯಾಚಿ ಸಾಗಾಟ ಮಾಡುತ್ತಿದ್ದ ಕ್ಯಾಂಟರ್ ಲಾರಿ ಅಂಬಿಕಾ ನಗರದಲ್ಲಿ ಏಕಾಏಕಿ ಕುಡಿದ ಮತ್ತಿನಲ್ಲಿ ಲಾರಿ ಚಾಲನೆ ಮಾಡುತ್ತಿದ್ದಾಗ ಲಾರಿ ನಿಯಂತ್ರಣ ತಪ್ಪಿ ಮನೆ ಮುಂದೆ ನಿಂತಿದ್ದ ಇನ್ನೋವ್ವಾ, ಸ್ವೀಫ್ಟ್,ಹಾಗೂ ಬ್ರೀಜಾ ಕಾರಿಗೆ ಡಿಕ್ಕಿ ಹೊಡೆದು ಲಾರಿ ಬಿಟ್ಟು ಪರಾರಿಯಾಗಿದ್ದಾನೆ.

ಸದ್ಯ ಅಂಬಿಕಾ ನಗರದಲ್ಲಿ ನಡೆಯಬಹುದಾಗಿದ್ದ ದೊಡ್ಡ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದ್ದು.ಘಟನೆ ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Tags:

error: Content is protected !!