ಬೈಲಹೊಂಗಲ್ ತಾಲೂಕಿನ ದೇವಲಾಪುರದ ಜ್ಞಾನೇಶ್ವರ ಮುನಿ ಮಹಾರಾಜರು (86) ಯಮಸಲ್ಲೇಖನ ವ್ರತದ ಮೂಲಕ ಸಮಾಧಿ ಮರಣ ಹೊಂದಿದ್ದಾರೆ.
ದೇವಲಾಪುರದ ಅಷ್ಟಮ ನಂದೀಶ್ವರ ಕ್ಷೇತ್ರದ ಸಂಸ್ಥಾಪಕರಾಗಿದ್ದ ಜ್ಞಾನೇಶ್ವರ ಮುನಿ ಮಹಾರಾಜರು ನವೆಂಬರ್ 13ರಂದು ಯಮ ಸಲ್ಲೇಖನ ವ್ರತ ಸ್ವೀಕರಿಸಿದ್ದರು. ಎಂಟು ದಿನಗಳ ಬಳಿಕ ನಿನ್ನೆ ಸಂಜೆ ಸಮಾಧಿಮರಣ ಹೊಂದಿದ್ದಾರೆ. ಇಂದು ಬೆಳಿಗ್ಗೆ ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾದ ಭಕ್ತಗಣದ ಉಪಸ್ಥಿತಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.
ಶ್ರೀ ಜ್ಞಾನೇಶ್ವರ ಮುನಿ ಮಹಾರಾಜರು ಧಾರವಾಡ ಹಾಗೂ ಬೆಳಗಾವಿಯಲ್ಲಿ ನೂರಕ್ಕೂ ಅಧಿಕ ಜೀನಮಂದಿರಗಳನ್ನ ನಿರ್ಮಿಸಿದ್ದರು.
ಧಾರವಾಡ ತಾಲೂಕಿನ ಗರಗದ ಬಡ ಕುಟುಂಬದಲ್ಲಿ 1941ರ ಜುಲೈ 12ರಂದು ಜನಿಸಿದ್ದ ಅವರು ತಹಶೀಲ್ದಾರ ಹುದ್ದೆಗೆರಿ ಜನ ಸೇವೆ ಮಾಡಿದ್ದರು. ಲೋಕಕಲ್ಯಾಣ ಅರ್ಥವಾಗಿ ಸನ್ 2000 ರಲ್ಲಿ ಬಾಹುಬಲಿ ಮುನಿ ಮಹಾರಾಜರಿಂದ ಬ್ರಹ್ಮಚರ್ಯ ದೀಕ್ಷೆ ಪಡೆದು, 2011ರ ನವೆಂಬರ್ 9ರಂದು ದಿಗಂಬರ ಮುನಿ ದೀಕ್ಷೆ ಪಡೆದಿದ್ದರು.