ವಿಜಯೇಂದ್ರ ರಚನೆ ಮಾಡಿರುವ ತಂಡಗಳಿಗೆ ಹಿಂದೆ ಇಲ್ಲ ಮುಂದೆ ಇಲ್ಲ ಎನ್ನುವ ಶಾಸಕ ಯತ್ನಾಳ ಹೇಳಿಕೆ ವಿಚಾರ. ಮುಂದೆ ಬರುವ ದಿನಗಳಲ್ಲಿ ಯಾರು ಅನಾಥ ಆಗ್ತಾರೆ ನೋಡೋಣ ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳಗೆ ಬಿವೈ ವಿಜಯೇಂದ್ರ ವಾರ್ನಿಂಗ್ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು. ಮುಂದೆ ಬರುವ ದಿನಗಳಲ್ಲಿ ಯಾರು ಅನಾಥ ಆಗ್ತಾರೆ ನೋಡೋಣ. ಅದರ ಬಗ್ಗೆ ಈಗಲೇ ಏನು ಮಾತನಾಡೋದಿಲ್ಲ. ಆರ್ . ಅಶೋಕ್ ಹೇಳಿಕೆಗೂ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು. ವಕ್ಪ ವಿಚಾರ ಯತ್ನಾಳ ಶುರುಮಾಡಿದ್ದೋ,ನಾನು ಶುರು ಮಾಡಿದ್ದು ಪ್ರಶ್ನೆ ಅಲ್ಲಾ. ಮೋದಿ ಅವರು ವಕ್ಫ ವಿಚಾರವಾಗಿ ಕಮೀಟಿ ಮಾಡಿದ್ದಾರೆ. ವಕ್ಫ ಕಾಯ್ದೆ ತರಲು ಮೋದಿ ಚಿಂತನೆ ಮಾಡತೀದಾರೆ. ಇದು ಯತ್ನಾಳ ,ವಿಜಯೇಂದ್ರ ಶುರುಮಾಡಿರೋ ಹೋರಾಟದ ಪ್ರಶ್ನೆ ಅಲ್ಲ ಎಂದರು.
ಇದು ಕೇಂದ್ರ ಸರ್ಕಾರದ ಚಿಂತನೆ ಇವತ್ತು ಮತ್ತು ನಾಳೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಕ್ಫ ವಿಚಾರವಾಗಿ ಧರಣಿ. ಮೂರು ತಂಡಗಳು ಧರಣಿ ಮಾಡಲಿದ್ದೇವೆ.
ಯತ್ನಾಳ ಕ್ರೇಡಿಟ್ ತಗೋಲಿ ಅದು ಪ್ರಶ್ನೆ ಅಲ್ಲ. ರೈತರಿಗೆ ಅನ್ಯಾಯ ಮಾಡೋ ಪ್ರಶ್ನೆ ಇಲ್ಲ ವಕ್ಪ್ ವಿಚಾರವಾಗಿ ಅಶೋಕ,ಛಲವಾದಿ ನಾರಯಾಣ ಸ್ವಾಮಿ,ನನ್ನ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ನಾವು ರೈತರಿಗೆ ಅನ್ಯಾಯ ಮಾಡೋಕೆ ಬಿಡಲ್ಲ ನಮ್ಮದು ರೈತರ ಪರವಾದ ಪಕ್ಷ ನಮ್ಮ ತಂದೆ ಕಾಲದಲ್ಲೂ ರೈತರ ಪರ ಹೋರಾಟ ಮಾಡಿದ್ದಾರೆ ಎಂದರು. ಬಿಜೆಪಿ ಯಾವಗಲೂ ರೈತರ ಪರ ಪಕ್ಷ ಭಾರತೀಯ ಜನತಾ ಪಾರ್ಟಿ ಜೊತೆ ಯತ್ನಾಳ ಇರ್ತಾರೆ ಎಂದರು.
ಸಿಎಂ ಖರ್ಚಿ ಅಲಾಗಡತೀದೆ
ಸಿಎಂ ಖರ್ಚಿಯನ್ನು ಹಾರಾಜಿಗಿಡಲಾಗಿದೆ.50 ಕೋಟಿ ಆಫರ್ ನಾವ ಮಾಡತಿಲ್ಲ. ಕಾಂಗ್ರೆಸ್ ಶಾಸಕರೇ 50 ಕೋಟಿ ಹಣ ಕೇಳತೀದ್ದಾರೆ. ಹೀಗಾಗಿ ಸಿಎಂ 50 ,ಕೋಟಿ 100 ಕೋಟಿ ಆಫರ್ ಬಗ್ಗೆ ಮಾತಾಡತೀದಾರೆ. ಸಿಎಂ ಯಾವ ಕ್ಷಣದಲ್ಲಿ ಆದರೂ ರಾಜೀನಾಮೆ ಕೊಡಬಹುದು ಎಂದರು.
ಇಡೀ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಟಾರ್ಗೆಟ್ ಮಾಡಿದ ವಿಜಯೇಂದ್ರ
ಕಾಂಗ್ರೆಸ್ ನಲ್ಲಿ ಸಿಎಂ ಹುದ್ದಗೆ ಪೈಪೋಟಿ ಇದೆ.
ಕೆಲ ಶಾಸಕರೇ ಅನುದಾನದ ವಿಚಾರವಾಗಿ ಮಾತಾಡತೀದಾರೆ. ಹೀಗಾಗಿ ಯಾವ ಕ್ಷಣದಲ್ಲಿ ಆದರೂ ಸಿಎಂ ರಾಜೀನಾಮೆ ಕೊಡಬಹುದು ಎಂದರು.