ಮೈಸೂರು ಸೇರಿ ದೇಶ ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಹಾಗೂ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಆಗ್ರಹಿಸಿ ಧಾರವಾಡದಲ್ಲಿ ವಕೀಲರು ಬೀದಿಗೆ ಇಳಿದು ಪ್ರತಿಭಟನಾ ಮೆರವಣೀಗೆ ನಡೆಸಿ ಆಕ್ರೋಶ ಹೊರಹಾಕಿದರು.
ಧಾರವಾಡದ ಕೋರ್ಟ್ ವೃತದ ಬಳಿಯ ಸಿವಿಲ್ ನ್ಯಾಯಾಲಯದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯವರೆಗೆ, ಧಾರವಾಡ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಹಲ್ಲೆಕೋರರ ವಿರುದ್ಧ ಧಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸೇರಿ ದೇಶದಲ್ಲಿ ವಕೀಲರ ಮೇಲೆ ಹಲ್ಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿವೆ. ಇತ್ತೀಚೆಗೆ ಮೈಸೂರಿನಲ್ಲಿಯು ವಕೀಲರ ಮೇಲೆ ಹಲ್ಲೆ ನಡೆದಿದೆ.
ಇದನ್ನು ಧಾರವಾಡ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ. ಈ ಕೂಡಲೇ ವಕೀಲರಿಗೆ ಅಯಾ ರಾಜ್ಯಗಳ ರಾಜ್ಯ ಸರ್ಕಾರಗಳು ಸೂಕ್ತ ಭದ್ರತೆ ನೀಡಬೇಕು. ಜತೆಗೆ ಹಲ್ಲೆ ಕೋರರ ವಿರುದ್ಧ ಕಠಿಣ ಕಾನೂ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಒಂದುವೇಳೆ ನಿರ್ಲಕ್ಷ್ಯ ತೋರಿದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ, ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರು ಹಾಗೂ ಸಿಎಂ ಅವರಿಗೆ ಮನವಿ ನೀಡಿದರು.