ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಅವರ ಅಸ್ತಿತ್ವವನ್ನು ಸಮಾಜದಲ್ಲಿ ತೋರಿಸಿ ಕೊಡಬೇಕೆಂದು ಹ್ಯೂಮ್ಯಾನಿಟಿ ಫೌಂಡೇಶನನ ಕಿರಣ್ ಬೇದಿ ಹೇಳಿದರು.
ಬೆಳಗಾವಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿಮಾನದ ನಡಿಗೆಯನ್ನು ನಡೆಸಲಾಯಿತು. ನಂತರ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಹ್ಯೂಮ್ಯಾನಿಟಿ ಫೌಂಡೇಶನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಪರೀಕ್ಷಕರಾಗಿ ಮೀನಾ ಬೆನಕೆ, ಅತಿಥಿಗಳಾಗಿ ಸಮಾಜಸೇವಕ ಸಂತೋಷ ದರೇಕರ, ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ದರು.
ಈ ವೇಳೆ ಹ್ಯೂಮ್ಯಾನಿಟಿ ಫೌಂಡೇಶನನ ಕಿರಣ್ ಬೇದಿ ಅವರು ಮಾತನಾಡಿ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಅಸ್ತಿತ್ವವನ್ನು ತೋರಿಸಲು ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನ ಈಗ ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ನಡೆಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ, ಸಮಾಜದಲ್ಲಿ ಸ್ಥಾನ, ಸರ್ಕಾರಿ ಯೋಜನೆಗಳ ಲಾಭ ದೊರೆಯಬೇಕು ಸೇರಿದಂತೆ ಇನ್ನುಳಿದ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ತಮ್ಮ ಅಸ್ತಿತ್ವವನ್ನು ತೋರಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ನಂತರ ನಡೆದ ಫ್ಯಾಷನ್ ಶೋ ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಉತ್ತಮ ಪ್ರದರ್ಶನ ನೀಡಿದರು.