Uncategorized

ನಂದಗಡದಲ್ಲಿ ಹೆಚ್ಚಿದ ನಾಯಿಗಳ ಕಿರಿಕಿರಿ…

Share

ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿ ನಾಯಿಗಳ ಹಾವಳಿಗೆ ಗ್ರಾಮಸ್ಥರು ಭಯದಿಂದ ಓಡಾಡುವ ನಿರ್ಮಾಣವಾಗಿದೆ.

ಖಾನಾಪುರ ತಾಲೂಕಿನ ನಂದಗಡದಲ್ಲಿ ಶ್ವಾನಗಳ ಪಡೆ ಗ್ರಾಮಸ್ಥರಲ್ಲಿ ಭೀತಿ ವಾತಾವರಣವನ್ನ ನಿರ್ಮಿಸುತ್ತಿದೆ. ಯಾರನ್ನ ಕಂಡರೂ ಬೊಗಳುತ್ತಾ ಬೆನ್ನು ಹತ್ತುತ್ತಿರುವ ನಾಯಿಗಳಿಂದ ಇಲ್ಲಿನ ಜನರು ಮಕ್ಕಳು ಹಾಗೂ ವೃದ್ಧರು ಮಹಿಳೆಯರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಂದಗಡದ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಲ್ಲಪ್ಪ ಗುರವ ಅವರಿಗೆ ಹಲವುಬಾರಿ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

ಅವರು ಬೆಳಿಗ್ಗೆ ತಮ್ಮ ವೃತ್ತಿಗಾಗಿ ಬೆಳಗಾವಿಗೆ ಹೋಗಿ ರಾತ್ರಿಯೇ ಮರಳಿ ನಂದಗಡಕ್ಕೆ ಬರುತ್ತಾರೆ. ಹೀಗಾಗಿ ಜನಸಾಮಾನ್ಯರು ಪಡುತ್ತಿರುವ ತೊಂದರೆಗೆ ಅವರಿಂದ ಯಾವುದೇ ರೀತಿಯ ಸ್ಪಂದನೆ ದೊರೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಸಂಬಂಧಿಸಿದ ಇಲಾಖೆಯವರು ಇತ್ತ ಗಮನಹರಿಸಿ ನಾಯಿಗಳ ಉಪಟಳವನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!