Hukkeri

ವಿದ್ಯಾರ್ಥಿಗಳಿಗೆ ಸುಜ್ಞಾನದ ದೀಪ ಬೆಳಗಿಸಬೇಕು – ಶಿಕ್ಷಕಿ ಆರುಂಧತಿ.

Share

ವಿದ್ಯಾರ್ಥಿಗಳಿಗೆ ಸುಜ್ಞಾನದ ದೀಪ ಹಚ್ಚಿ ಜ್ಞಾನ ನೀಡುವದು ಶಿಕ್ಷಕರ ಜವಾಬ್ದಾರಿ ಯಾಗಿದೆ ಪ್ರಧಾನ ಶಿಕ್ಷಕಿ ಆರುಂಧತಿ ಶಿರಗೆ ಹೇಳಿದರು.
ಅವರು ಇಂದು ದೀಪಾವಳಿ ಮತ್ತು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹುಕ್ಕೇರಿ ಕೋಟೆ ಭಾಗದ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಮಾತನಾಡಿದರು.

ದೀಪಾವಳಿ ಮತ್ತು ರಾಜ್ಯೋತ್ಸವ ಮುಗಿದ ನಂತರ ಶಾಲಾ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಮಹತ್ವ ತಿಳಿಸುವ ಉದ್ದೇಶದಿಂದ ಹಮ್ಮಿಕೊಂಡ ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ ಅದ್ಯಕ್ಷ ಸುಭಾಷ ನಾಯಿಕ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಕೇವಲ ಹೇಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಈ ಸರಕಾರಿ ಶಾಲೆಯಲ್ಲಿ ಗುರುಮಾತೆಯರು ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಅವರ ಕಾರ್ಯ ಶ್ಲಾಘನಿಯ ಎಂದರು.

ನಂತರ ವಿದ್ಯಾರ್ಥಿಗಳಿಂದ ದೀಪ ಬೆಳಗಿಸಿ ಹಬ್ಬಗಳ ಮಹತ್ವ ತಿಳಿಸಿದರು . ಮುಖ್ಯಾದ್ಯಾಪಕಿ ಆರುಂಧತಿ ಶೀರಗೆ ಮಾತನಾಡಿ ನಮ್ಮ ಶಾಲೆಯಲ್ಲಿ ಕೇವಲ ಹೇಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವದರಿಂದ ನಮ್ಮ ನಾಡಿನ ಸಂಸ್ಕೃತಿಗಳ ಮತ್ತು ಹಬ್ಬಗಳ ಮಹತ್ವ ಕುರಿತು ಉಪನ್ಯಾಸ ಮಾಡಿ ಸುಜ್ಞಾನದ ದೀಪ ಹಚ್ಚಿ ದೀಪಾವಳಿ ಮತ್ತು ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು , ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅದ್ಯಕ್ಷ ಶಂಕರ ಹೆಗಡೆ, ಉಪಾದ್ಯೆಕ್ಷೆ ಸಕ್ಕು ಹೆಗಡೆ, ಸದಸ್ಯರಾದ ಪೂಜಾ ಚಿಕ್ಕೋಡಿ, ಮಲಪ್ರಭಾ ತೋಂಬ್ರೆ, ರೂಪಾ ತಳವಾರ, ಶೃಷ್ಟಿ ಕೋರಿ, ಮಹಾಂತೇಶ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!