Uncategorized

ಅಮ್ಮಾಜೇಶ್ವರಿ – ಕೊಟ್ಟಲಗಿ ಏತನೀರಾವರಿ ಯೋಜನೆಯ ಎಮ್ ಎಸ್ ಪೈಪುಗಳ ಉದ್ಘಾಟಿಸಿದ ಶಾಸಕ ಸವದಿ….

Share

ಅಥಣಿ : ಮುಂದಿನ ವರ್ಷದ ಒಳಗಾಗಿ ನೀರು ಒದಗಿಸುವ ಕಾರ್ಯ ಮಾಡಲಾಗುವುದು, 17100HP ಸಾಮರ್ಥ್ಯದ ಮೂರು ಮೋಟರು ಕೂಡಿಸಿ ನೀರು ಪೂರೈಸಲಾಗುವುದು, ಕೃಷ್ಣಾ ನದಿಯ ಪ್ರವಾಹ ಮಹಾಪೂರ ಬಂದರೂ ಕೂಡ ತೊಂದರೆಯಾಗದಂತಹ ಉನ್ನತ ತಂತ್ರಜ್ಞಾನದ ವ್ಯವಸ್ಥೆಯನ್ನು ಅಳವಡಿಸಿಕೊಂಡು ರಾಜ್ಯದಲ್ಲಿಯೇ ಮಾದರಿ ಯೋಜನೆಯನ್ನಾಗಿಸಲಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು.

ಅವರು ತಾಲೂಕಿನ ಅರಟಾಳ ಕ್ರಾಸ್ ಹತ್ತಿರ ಜರುಗಿದ ಅಮ್ಮಾಜೇಶ್ವರಿ – ಕೊಟ್ಟಲಗಿ ಏತನೀರಾವರಿ ಯೋಜನೆಯ ಎಮ್ ಎಸ್ ಪೈಪುಗಳ ಜೋಡನೆಯ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಭಾಗದ ರೈತರ ಬಹುದಿನದ ಕನಸು ಜಾತಕ ಪಕ್ಷಿಯ ಹಾಗೆ ನೀರಿಗಾಗಿ ಕಾಯುತ್ತಾ ಇದ್ದರು ಈ‌ ಅಮ್ಮಾಜೇಶ್ವರಿ ಏತ ನೀರಾವರಿಯ ಮೂಲಕ ಕೆರೆ ತುಂಬುವ ಯೋಜನೆ ಜೊತೆಗೆ ಗ್ರಾಮದ ಎಲ್ಲರಿಗೂ ನೀರು ಕೊಡಲಾಗುವುದು ಎಂದರು.

ತುಬಚಿ ಬಬಲೇಶ್ವರಿ ಏತ ನೀರಾವರಿ ಮಂಜೂರು ಮಾಡುವ ವೇಳೆ ನಮ್ಮ ಭಾಗದ 07 ಹಳ್ಳಿಗಳಿಗೆ ಆಡಳಿತಾತ್ಮಕ ಮಂಜೂರು ಮಾಡಲಾಗಿತ್ತು, ಸರಕಾರ ಬದಲಾದ ವೇಳೆ ಈ ಹಳ್ಳಿಗಳು ಯೋಜನೆಯಿಂದ ವಂಚನೆಯಾಗಿದ್ದವು ಇದೀಗ ಈ 07 ಹಳ್ಳಿಗಳಿಗೆ ಸುವರ್ಣಕಾಲ ಬಂದಿದೆ ತಾವೆಲ್ಲ ಸದುಪಯೋಗ ಪಡೆಸಿಕೊಳ್ಳಿ ಎಂದರು.

ಎಸ್ ಕೆ ಬುಟಾಳಿ, ಶೇಖರ ನೇಮಗೌಡ, ಶಿವಾನಂದ ಗುಡ್ಡಾಪೂರ ಅವರು ಮಾತನಾಡಿ ಬರದ ನಾಡಿಗೆ ಅತೀ ಶೀಘ್ರದಲ್ಲಿ ಏತ ನೀರಾವರಿ ಮೂಲಕ ನೀರನ್ನು ಒದಗಿಸಿ ರೈತರ ಮುಖದಲ್ಲಿ ಸಂಸತವನ್ನು ಉಂಟು ಮಾಡುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯ ಎಂದರು.

ಈ ವೇಳೆ ಸಿದರಾಯ ಯಲಡಗಿ, ಶಾಂತಿನಾಥ ನಂದೇಶ್ವರ, ಚಂದ್ರಕಾಂತ ಇಮ್ಮಡಿ, ಗುರಪ್ಪ ದಾಶ್ಯಾಳ, ಶ್ಯಾಮ ಪೂಜಾರಿ, ಶಿವಾನಂದ ಗುಡ್ಡಾಪೂರ, ಪ್ರವೀಣ ಹುಣಸಿಕಟ್ಟಿ ಸೇರಿದಂತೆ ಅನೇಕರಿದ್ದರು‌

Tags:

error: Content is protected !!