Chikkodi

ನೂತನ ತಾಯಿ ಮಗು ಆಸ್ಪತ್ರೆಯ ತಾಯಿ ಮಗುಗಳಿಗೆ ಹೂವು,ಸಿಹಿ ನೀಡಿ ಶುಭ ಕೋರಿದ ಕರವೇ ಕಾರ್ಯಕರ್ತರು

Share

ಚಿಕ್ಕೋಡಿ: ಸುಮಾರು ಮೂರು ವರ್ಷಗಳ ಹಿಂದೆ 28 ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾದ ತಾಯಿ ಮಗು ಆಸ್ಪತ್ರೆಯಲ್ಲಿ ತಾಯಿ ಮಗುಗಳಿಗೆ ಕರವೇ ಕಾರ್ಯಕರ್ತರು ಹೂವು,ಸಿಹಿ ನೀಡಿ ಶುಭಾಶಯ ಕೋರಿದರು.

ತಾಯಿ ಮಗು ಆಸ್ಪತ್ರೆಯು ಆರಂಭವಾಗದೇ ಪಾಳು ಬಿದ್ದಿತ್ತು, ಇದನ್ನು ಕಂಡ ಕರವೇ ಪದಾಧಿಕಾರಿಗಳು ಪ್ರತಿಭಟನೆ ಮಾಡಿ ಸರಕಾರಕ್ಕೆ ಸಂದೇಶ ನೀಡಿದರು, ಇದನ್ನು ಅರಿತ ಚಿಕ್ಕೋಡಿ ವಿ.ಪ. ಸದಸ್ಯರಾದ ಪ್ರಕಾಶ ಹುಕ್ಕೇರಿ, ಶಾಸಕರಾದ ಗಣೇಶ ಹುಕ್ಕೇರಿ, ಉಪವಿಭಾಗೀಯ ದಂಡಾಧಿಕಾರಿಗಳಾದ ಸುಭಾಷ ಸಂಪಗಾವಿ, ತಹಶೀಲ್ದಾರರಾದ ಚಿದಂಬರ ಕುಲಕರ್ಣಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ತಕ್ಷಣ ಆಸ್ಪತ್ರೆಯನ್ನು ಆರಂಭಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದು,

ಅಲ್ಲಿ ಮೊಟ್ಟ ಮೊದಲು ಹೆಣ್ಣು ಮಗು ಜನಸಿ ಆನಂದ ಉಂಟು ಮಾಡಿದೆ, ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾದ, ಸಂಜು ಬಡಿಗೇರ ಇವರ ನೇತೃತ್ವದಲ್ಲಿ ಅಲ್ಲಿಯ ಬಾನಂತಿಯರಿಗೆ ಮತ್ತು ಸಿಬ್ಬಂದಿಗಳಿಗೆ ಹೂವು, ಸಿಹಿ ನೀಡಿ ಶುಭಾಶಯ ಕೋರಿದರು, ಈ ಸಂಧರ್ಭದಲ್ಲಿ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ವಿ.ಪ.ಸದಸ್ಯರಾದ ಪ್ರಕಾಶ ಹುಕ್ಕೇರಿ ಮತ್ತು ಶಾಸಕರಾದ ಗಣೇಶ ಹುಕ್ಕೇರಿ ಇವರ ಪ್ರಯತ್ನದಿಂದ, ಮೂರು ವರ್ಷಗಳ ಹಿಂದೆ ಸುಮಾರು 28 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತಾಯಿ ಮಗು ಆಸ್ಪತ್ರೆಯು, ಕೆಲ ಆರೋಗ್ಯಹಗೂ ಇಲಾಖೆಯ ಅಧಿಕಾರಿಗಳ ಕುತಂತ್ರದಿಂದ ಆರಂಭವಾಗದೇ ಪಾಳು ಬಿದ್ದಿತ್ತು, ಈಗ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಯು ಅತ್ಯಾಧುನಿಕ ಯಂತ್ರಗಳನ್ನು, ನುರಿತ ವೈದ್ಯರನ್ನು ಹಾಗೂ ಸಿಬ್ಬಂದಿಗಳನ್ನು ಹೊಂದಿದೆ. ಈ ಭಾಗದ ಬಾಣಂತಿಯರು ಈ ಆಸ್ಪತ್ರೆಯ ಉಪಯೋಗ ಪಡೆಯಬೇಕು ಎಂದು ಹೇಳಿದರು.

ಕರವೇ ತಾಲ್ಲೂಕಾ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ ಹಳೆಯ ಆಸ್ಪತ್ರೆಯಲ್ಲಿ ಸರಿಯಾದ ಸೇವೆ ಸಿಗದೇ ಖಾಸಗಿಯವರ ಕಡೆಗೆ ಬಾನಂತಿಯರನ್ನು ಕಳುಹಿಸುವ ತಂತ್ರ, ಕುತಂತ್ರ ಆಗುತ್ತಿತ್ತು, ಹಾಗೆ ಇಲ್ಲಿ ಯಾವುದೇ ಘಟನೆಗಳು ಆಗಬಾರದು, ಆಸ್ಪತ್ರೆಯ ಬಳಕೆಯನ್ನು ಸರಿಯಾಗಿ ಮಾಡಿಕೊಳ್ಳಬೇಕು, ಒಂದು ವೇಳೆ ಅಸ್ತವ್ಯಸ್ತೆ ಕಂಡು ಬಂದಲ್ಲಿ ಹೋರಾಟ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಪ್ರಕಾಶ ಹುಕ್ಕೇರಿ ಇವರು ಈ ಆಸ್ಪತ್ರೆಗೆ ರಸ್ತೆ, ಕುಡಿಯುವ ನೀರು, ಇತರ ಯಂತ್ರೋಪಕರಣ ಹಾಗೂ ಇನ್ನುಳಿದ ಸಿಬ್ಬಂದಿಗಳ ವ್ಯವಸ್ಥೆಯನ್ನು ಕೂಡಲೇ ಮಾಡಬೇಕೆಂದು ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಬಸವರಾಜ ಸಾಜನೆ, ರುದ್ರಯ್ಯಾ ಹಿರೇಮಠ, ಅಮೂಲ ನಾವಿ, ರಫೀಕ ಪಠಾಣ, ಬಸವರಾಜ ಮಾನೆ, ಮುಖ್ಯ ವೈದ್ಯಾಧಿಕಾರಿಗಳಾದ ನಾಗರಬೆಟ್ಟ, ಜಯಶ್ರೀ ಮುಸಳೆ, ನರ್ಸಿಂಗ್ ಅಧಿಕಾರಿಗಳಾದ, ಗೀತಾ ಕುಂಬಾರ, ಸುಧಾ ಯಲ್ಲಾಲಿಂಗ, ಶಿವು ನಾಯಕ ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:

error: Content is protected !!