Chikkodi

ಮೈಸೂರಿನಲ್ಲಿ ಮೆಳೈಸಿದ ಹೊಸ ಇಂಗಳಿಯ ಝಾಂಜ್ ಪತಾಕೆ..! ಗ್ರಾಮದ ಕೀರ್ತಿ ಹೆಚ್ಚಿಸಿದ ತಂಡದ ಸದಸ್ಯರಿಗೆ ಗ್ರಾಮದಲ್ಲಿ ಸನ್ಮಾನ..!!!

Share

ಚಿಕ್ಕೋಡಿ :ತಾಲೂಕಿನ ಹೊಸ ಇಂಗಳಿ ಗ್ರಾಮದ ಎಜಿಎಂ ಝಾಂಜ್ ಪತಕ ಕಲಾತಂಡದರು ಇತ್ತಿಚಿಗೆ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಂಡು, ಕಲಾತಂಡಗಳ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು, ಹೊಸ ಇಂಗಳಿ ಗ್ರಾಮದ ಕೀರ್ತಿ ಪತಾಕೆಯನ್ನು ರಾಜ್ಯಮಟ್ಟದಲ್ಲಿ ಹಾರಿಸಿದ್ದಾರೆ. ಅವರ ಈ ಸಾಧನೆಗೆ ಗ್ರಾಮದಲ್ಲಿ ಅಭಿನಂದನೆಗಳು ಹರಿದು ಬರುತ್ತಿದ್ದು, ಗ್ರಾಮದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಕಲಾತಂಡದ ಸದಸ್ಯರನ್ನು ಸನ್ಮಾನಿಸಿ, ಗೌರವಿಸಿದ್ದಾರೆ.

ಹೊಸ ಇಂಗಳಿ ಗ್ರಾಮದ ಎಜಿಎಂ ಝಾಂಜ್ ಪತಕಾ ತಂಡವು, ಈ ಭಾಗದಲ್ಲಿ, ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ, ಚಿರಪರಿಚರಾಗಿದ್ದಾರೆ. ಜೊತೆಗೆ ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ರಾಜ್ಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಪ್ರತಿ ವರ್ಷವೂ ಮೈಸೂರು ದಸರಾ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಗ್ರಾಮೀಣ ಸೊಗಡಿನ ಝಾಂಜ್ ಪತಾಕಾ ಕಲೆಯನ್ನು ಪ್ರದರ್ಶನ ಮಾಡುತ್ತಾ ಬಂದಿರುತ್ತಾರೆ.

ಅದರಂತೆ ಈ ವರ್ಷ ಇತ್ತೀಚಿಗೆ ಸಂಪನ್ನಗೊಂಡ ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಹಿರಿಯ ಮುಖಂಡರಾದ ಡಾ. ಪ್ರಭಾಕರ್ ಕೋರೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಚಿಕ್ಕೋಡಿ ಸದಲಗಾದ ಶಾಸಕರಾದ ಗಣೇಶಕ್ಕೇರಿ ಇವರ ಸಹಕಾರದೊಂದಿಗೆ ಭಾಗವಹಿಸಿ, ಕಲಾತಂಡಗಳ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು, ಹೊಸ ಇಂಗಳಿ ಗ್ರಾಮದ, ಚಿಕ್ಕೋಡಿ ತಾಲೂಕಿನ ಜೊತೆಗೆ ಬೆಳಗಾವಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಅವರ ಈ ಸಾಧನೆಗೆ ಜಿಲ್ಲೆಯ ಎಲ್ಲ ಕಡೆಗಳಿಂದ ಅಭಿನಂದನೆಗಳು ಹರಿದು ಬರುತ್ತಿದ್ದು, ಗ್ರಾಮಕ್ಕೆ ಆಗಮಿಸಿದ ಎಜಿಎಂ ಕಲಾತಂಡದ ಸದಸ್ಯರನ್ನು ಹೊಸ ಇಂಗಳಿ ಗ್ರಾಮದ ಶ್ರೀ ಲಕ್ಷ್ಮೀ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸಂಸ್ಥಾಪಕರಾದ ಚಂದ್ರಕಾಂತ ಲಂಗೋಟೆ, ಅಧ್ಯಕ್ಷರಾದ ರಮೇಶ ಮುರಚಿಟ್ಟೆ, ಉಪಾಧ್ಯಕ್ಷರಾದ ಜಯಪಾಲ ಜುಗೂಳೆ ಹಾಗೂ ಸರ್ವ ಸದಸ್ಯರು ಸೇರಿ ಸನ್ಮಾನಿಸಿ, ಅಭಿನಂದಿಸಿದ್ದಾರೆ. ಈ ಸಮಯದಲ್ಲಿ ಹೊಸ ಇಂಗಳಿ ಗ್ರಾಮದ ಹಿರಿಯರಾದ ಸಂತೋಶ ಚಿಂಚಲೆ, ಅಶೋಕ ಬಾಮನೆ, ಬಾಬು ಕೊಡತೆ, ಶಿವಾನಂದ ಚೌಗುಲೆ, ಬಾಬು ರಾಜಮಾನೆ, ಅಣ್ಣಾಸಾಬ ಚಿಂಚಲೆ, ಸುರೇಂದ್ರ ಲಂಗೋಟೆ, ಸುರೇಶ ಪವಾರ ಸೇರಿದಂತೆ ಹೊಸ ಇಂಗಳಿ ಗ್ರಾಮಸ್ಥರು ಹಾಗೂ ಸಂಘದ ಸದಸ್ಯರಾದ ಅಣ್ಣಾಸಾಬ ಸರಡೆ, ಶಂಕರ ಸುಂಗಾರೆ, ಪ್ರಭಾಕರ ಕುಡಚೆ, ಲಗಮಣ್ಣಾ ಅವರಾದೆ, ಸಂಜಯ ಭರಮೆ, ರಾಜುಕುಮಾರ ಚಿಗರೆ, ರಾಹುಲ ಕೆರಬಾ, ಕಸ್ತೂರಿ ಗಡಕರಿ, ರಾಣಿ ಖೋತ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆರ್.ಡಿ. ಪವಾರ ನಿರೂಪಿಸಿದರು.

ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ…

Tags:

error: Content is protected !!