ಗೃಹಲಕ್ಷ್ಮೀ ಹಣದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ವಿದ್ಯಾರ್ಥಿಗಳಿಗೆ ಗ್ರಂಥಾಲಯವನ್ನು ನಿರ್ಮಿಸಿದ ರಾಯಬಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಮಲ್ಲವ್ವ ಮೇಟಿ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಯಬಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಮಲ್ಲವ್ವ ಮೇಟಿ ಗೃಹ ಲಕ್ಷ್ಮೀಯ ಹಣ ಕೂಡಿಟ್ಟು ಮತ್ತು ವೈಯಕ್ತಿಕ ಹಣವನ್ನು ಬಳಸಿ
ಸ್ಪರ್ಧಾತ್ಮಕ ಪರೀಕ್ಷೆಗಳ ವಿದ್ಯಾರ್ಥಿಗಳಿಗೆ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ. ಇವರ ಈ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಲ್ಲವ್ವ ಆಧುನಿಕಯುಗದ ಸಾವಿತ್ರಿಬಾಯಿ ಫೂಲೆಯಂತೆ ಕಾರ್ಯವನ್ನು ಮಾಡಿದ್ದಾರೆ. ಮಲ್ಲವ್ವ ಮೇಟಿ ಅವರು ನಿರ್ಮಿಸಿದ ಗ್ರಂಥಾಲಯಕ್ಕೆ “ಗೃಹಲಕ್ಷ್ಮೀ” ಹೆಸರಿಡುವಂತೆ ಶಾಸಕರು ಸೂಚಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಬರೆದ ಕಾನೂನು ಹೆಗ್ಗಡತಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.