Hukkeri

ಸಂಕೇಶ್ವರ ದಲ್ಲಿ ರೈತರ ಜಮಿನು ಕಬಳಿಸಿ ವ್ಯಾಪಾರ ಮಳಿಗೆ ನಿರ್ಮಾಣ.

Share

ಹುಕ್ಕೇರಿ ತಾಲೂಕಿನ ಸಂಕೇಶ್ವರ ಹೋರವಲಯದ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಹತ್ತಿರ ಬೃಹತ್ತಾದ ವ್ಯಾಪಾರ ಮಳಿಗೆ ನಿರ್ಮಾಣವಾಗುತ್ತಿದೆ, ಆದರೆ ನೂರಾರು ಎಕರೆ ಜಮಿನುಗಳಿಗೆ ಹೋಗುವ ರಸ್ತೆ ಅತಿಕ್ರಮಣ ಮಾಡಿ ಆವರಣ ಗೋಡೆ ನಿರ್ಮಾನವಾಗಿದ್ದರಿಂದ ರೈತರು ಬೆಳೆದ ಫಸಲು ಪಡೆಯಲು ದಾರಿ ಇಲ್ಲದಂತಾಗಿದೆ.

ಈ ಕುರಿತು ರೈತ ಬಾಬುರಾವ ಹಾಲಗಡಗಿ ಇನ್ ನ್ಯೂಜ ಜೋತೆ ಮಾತನಾಡುತ್ತಾ ನೂರಾರು ವರ್ಷಗಳಿಂದ ನಮ್ಮ ಪೂರ್ವಿಜರು ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಜಮಿನುಗಳಿಗೆ ನಾವು ಬಿತ್ತಿ ಬೆಳೆದ ಫಸಲು ಪಡೆಯಲು ದಾರಿ ಇಲ್ಲದಂತಾಗಿದೆ, ಇತ್ತಿಚಿಗೆ ಬೃಹತ್ ವ್ಯಾಪಾರ ಮಳಿಗೆ ಕಟ್ಟಡ ತಲೆ ಎತ್ತಿ ನಿಂತಿದೆ ಅದಕ್ಕೆ ಆವರಣ ಗೋಡೆ ಕಟ್ಟಡಕ್ಕೆ ಪಕ್ಕದ ರೈತರ ಜಮಿನು ಕಬಳಿಸಿದೆ. ಈ ಕುರಿತು ಮುಖ್ಯಮಂತ್ರಿ ಗಳಿಗೆ, ಜಿಲ್ಲಾಧಿಕಾರಿ ಗಳಿಗೆ ಹಾಗೂ ತಹಸಿಲ್ದಾರರಿಗೆ ಮನವಿ ಸಲ್ಲಿಸಲಾಗಿದೆ ಆದರೆ ಯಾವದೇ ಕ್ರಮ ಕೈಕೊಂಡಿಲ್ಲಾ ಇದರಿಂದಾಗಿ ನೂರಾರು ಎಕರೆ ಜಮಿನಿನ ರೈತರು ತಮ್ಮ ಜಮಿನುಗಳಿಗೆ ಹೋಗಲು ರಸ್ತೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ನಮ್ಮ ಕುಟುಂಬದ ಉಪ ಜಿವನಕ್ಕೆ ಇರುವ ಈ ಜಮಿನಿನಲ್ಲಿ ಬೆಳೆದ ಬೇಳೆ ತರಲು ರಸ್ತೆ ಇಲ್ಲವಾಗಿದೆ ಕೂಡಲೆ ಸಂಭಂದಿಸಿದ ಅಧಿಕಾರಿಗಳು ನಮ್ಮ ಜಮಿನುಗಳಿಗೆ ತೇರಳಲು ರಸ್ತೆ ಮಾಡಿ ಕೊಡಬೇಕು ಇಲ್ಲವಾದರೆ ನಮ್ಮ ಕುಟುಂಬಸ್ಥರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಇಲ್ಲಾ ಆತ್ಮ ಹತ್ಯೆ ಮಾಡಿಕೋಳ್ಳುವದಾಗಿ ಎಚ್ಚರಿಕೆ ನೀಡಿದರು.

ಈ ಕುರಿತು ಮುಖ್ಯಮಂತ್ರಿಗಳ ಕಾರ್ಯಾಲಯ ಜಿಲ್ಲಾಧಿಕಾರಿಗಳಿಗೆ ಸರಿ ಪಡಿಸಲು ಸೂಚನೆ ನೀಡಿದೆ ಅದರಂತೆ ತಹಸಿಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪುರಸಭೆಗೆ ಪಟ್ಟಣದ ರಿಸ ನಂಬರ 154 / 1 ಕೃಷಿ ಜಮಿನಿಗೆ ಹೋಗಲು ನಿಯಮಾನುಸಾರ ಕಾಲು ದಾರಿ ಬಂಡಿ ದಾರಿ ಕಲ್ಪಿಸಿ ಕೊಡಲು ನಿರ್ದೆಶನ ನೀಡಿದರು ಯಾವದೇ ಕ್ರಮ ಜಾರಿಯಾಗಿಲ್ಲಾ ಅಂದರೆ ಅಧಿಕಾರಿಗಳು MNC ಕಂಪನಿಗಳ ಕೈ ಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜನ ಆಡಿಕೋಳ್ಳುತ್ತಿದ್ದಾರೆ.

Tags:

error: Content is protected !!