ರಾಷ್ಟ್ರೀಯ ಪ್ಯಾರಾ ಓಲಂಪಿಕ್ಸಗೆ ಬೆಳಗಾವಿಯ ಓಂ ಜವಳಿ, ಶುಭಂ ಕಾಂಬಳೆ ಮತ್ತು ಸಂಚಿತಾ ಸಾತಪುತೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಬಸವನಗುಡಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಪ್ಯಾರಾ ರಾಷ್ಟ್ರೀಯ ಟ್ರಯಲ್ ಸ್ವಿಮಿಂಗ್ ಚಾಂಪಿಯನ್ಶಿಪ್ನಲ್ಲಿ ಅಬಾ ಮತ್ತು ಹಿಂದ್ ಕ್ಲಬ್ನ ಪ್ಯಾರಾ ಈಜುಪಟು ಕುಮಾರ್ ಓಂ ಜವಳಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ, ಕುಮಾರ್ ಶುಭಂ ಕಾಂಬಳೆ ಮೂರು ಚಿನ್ನ ಮತ್ತು ಸಂಚಿತಾ ಸಾತಪುತೆ ಮೂರು ಚಿನ್ನ ಗೆದ್ದು ಕರ್ನಾಟಕ ರಾಜ್ಯ ಸ್ವಿಮ್ಮಿಂಗ್ ತಂಡದಲ್ಲಿ ಪ್ರವೇಶ ಪಡೆದಿದ್ದಾರೆ.
ಅಕ್ಟೋಬರ್ 19 ರಿಂದ 23 ರವರೆಗೆ ಪಣಜಿ ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಈ ಕ್ರೀಡಾಪಟುಗಳು ಅಕ್ಟೋಬರ್ 19 ರಂದು ಗೋವಾಗೆ ತೆರಳಲಿದ್ದಾರೆ.ಇವರಿಗೆ ತರಬೇತುದಾರರಾದ ವಿಶ್ವಾಸ್ ಪವಾರ್, ರಂಜಿತ್ ಪಾಟೀಲ್, ಅಬಾ ಮತ್ತು ಹಿಂದ್ ಕ್ಲಬ್ನ ವಿಶಾಲ್ ವೇಸನೆ ಮಾರ್ಗದರ್ಶನ ನೀಡಿದ್ದಾರೆ. ವಿಜೇತರನ್ನು ಕರ್ನಾಟಕ ಈಜು ಸಂಘದ ಉಪಾಧ್ಯಕ್ಷರಾದ ಎಸ್ ಆರ್ ಸಿಂಧ್ಯಾ ಅಭಿನಂದಿಸಿದ್ದಾರೆ.