ಸುಳ್ಳು ಮೊಕದ್ದಮೆ ಇದ್ದರೆ, ಅಂಥ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಬಹುದಾಗಿದ್ದು ಇಲ್ಲೂ ಅದೇ ತರಹದ ಪ್ರಕರಣವಿರುವುದರಿಂದ ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ಹಳೇಹುಬ್ಬಳ್ಳಿ ಪ್ರಕರಣ ವಾಪಸಾತಿ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ಸಂಪುಟದ ಮುಂದೆ ಬಂದಿತ್ತು. ಅದರ ಕುರಿತು ಶಿಫಾರಸ್ಸು ಮಾಡಲಾಗಿತ್ತು. ನ್ಯಾಯಾಲಯ ಅನುಮತಿ ಕೊಟ್ಟರೆ ಮಾತ್ರ ವಾಪಸ್ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಅದಾಗದು ಎಂದು ನುಡಿದರು.
ಪ್ರಕರಣಗಳ ವಾಪಸಾತಿ ಬಿಜೆಪಿ ಕಾಲದಲ್ಲೂ ಇತ್ತು. ನಮ್ಮ ಕಾಲದಲ್ಲೂ ಇತ್ತು. ಈಗಲೂ ಇದೆ ಎಂದ ಅವರು, ಬಿಜೆಪಿಯವರೂ ಸಹ ಅನೇಕ ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ ಎಂದು ಖಡಕ್ಕಾಗಿ ನುಡಿದರು.