ದಸರಾ ಹಬ್ಬದೇ ರಾತ್ರಿಯ ಮಿಠಾಯಿ ಅಂಗಡಿಯಲ್ಲಿ ಕಳ್ಳತನ ಮಾಡಿದ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ.
ದಸರಾ ಹಬ್ಬದೇ ರಾತ್ರಿಯ ಬೆಳಗಾವಿ ನಗರದ ಪೋಸ್ಟ್ ಆಫೀಸ್ ಎದುರಿನ ಮಿಠಾಯಿ ಅಂಗಡಿಯಲ್ಲ ಕಳ್ಳತನವಾಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಕಳ್ಳರ ಈ ಕೈ ಚಳಕ ಸಿಸಿಟ್ಹಿವಿಯಲ್ಲಿ ಸೆರೆಯಾಗಿದೆ. ಶೇಟರ್ ತೆರೆದು ಡ್ರಾವರನಲ್ಲಿ ಒಡೆದು ಸುಮಾರೂ ಮೂವತ್ತು ಸಾವಿರ ರೂಪಾಯಿಯನ್ನು ದೋಚಲಾಗಿದೆ. ಅಲ್ಲದೇ ಮಿಠಾಯಿ ಅಂಗಡಿಯಲ್ಲಿದ್ದ ಚಾಕಲೇಟ್ಸಗಳನ್ನು ಸಹ ಕಳ್ಳರು ತೆಗೆದುಕೊಂಡು ಹೋಗಿದ್ದಾರೆ. ಕಳ್ಳರ ಈ ಕೈಚಳಕ ಸಿಸಿಟ್ಹಿವಿಯಲ್ಲಿ ಸೆರೆಯಾಗಿದೆ. ಇಂದು ಬೆಳಿಗ್ಗೆ ಅಂಗಡಿಗೆ ಬಂದ ಮಾಲೀಕರು ಕಳ್ಳತನದ ಘಟನೆಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.