Banglore

ಸುದೀರ್ಘ ರಾಜಕಾರಣಕ್ಕಾಗಿ ದೇವರ ಆಶೀರ್ವಾದ ಸದಾ ನನ್ನ ಮೇಲಿದೆ…

Share

ದೇವರ ಆಶೀರ್ವಾದ ಸದಾ ನನ್ನ ಮೇಲಿದೆ ಆದ್ದರಿಂದಲೇ ಸುದೀರ್ಘವಾಗಿ ರಾಜಕಾರಣ ಮಾಡುತ್ತಿದ್ದೇನೆ. ದುಷ್ಟ ಸಂಹಾರವಾಗಲಿದೆ ಎಂದು ಹೇಳುವ ಶೋಭಾ ಕರಂದ್ಲಾಜೆ ಮೊದಲೂ ಈ ಮಾತನ್ನ ಪೋಕ್ಸೋ ಪ್ರಕರಣ ದಾಖಲಾದ ಯಡಿಯೂರಪ್ಪನವರಿಗೆ ಹೇಳಲಿ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ರು. ಇಂದು ಬೆಂಗಳೂರಿನಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ನಾಳೆ ಜಂಬು ಸವಾರ ನಡೆಯಲಿದ್ದು, ಸುದೀರ್ಘವಾಗಿ ನಾಡದೇವಿ ಚಾಮುಂಡೇಶ್ವರಿಗೆ ಹೆಚ್ಚು ಬಾರಿ ಪುಷ್ಪಾರ್ಚಣೆ ಮಾಡುವ ಅವಕಾಶವನ್ನು ರಾಜ್ಯದ ಜನರು ಒದಗಿಸಿ ಕೊಟ್ಟಿದ್ದಾರೆ. ನನ್ನ ಮೇಲೆ ಸದಾ ದೇವರ ಆರ್ಶೀವಾದ ಇರುವ ಹಿನ್ನೆಲೆ ರಾಜ್ಯದಲ್ಲಿ ಇಷ್ಟು ವರ್ಷ ಸುದೀರ್ಘ ರಾಜಕಾರಣ ನಡೆಸಲಾಗುತ್ತಿದೆ ಎಂದರು.

ಆರೋಗ್ಯಕರ ಟೀಕೆ-ಟಿಪ್ಪಣಿಗಳು ನಡೆದಾಗಲೇ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಇನ್ನು ಕಾಂಗ್ರೆಸ್ ಸರ್ಕಾರ ಜಾಹೀರಾತು ದುಷ್ಟ ಶಕ್ತಿಗಳ ಸಂಹಾರ ಶಿಷ್ಟರ ರಕ್ಷಣೆಯ ಕುರಿತು ಮಾತನಾಡಿದ ಸಿಎಂ ದಸರಾ ವಿಜಯದ ಸಂಕೇತ. ವಿಜಯನಗರದಿಂದ ಮೈಸೂರು ಸಂಸ್ಥಾನದ ವರೆಗೆ ಪರಂಪರೆ ನಡೆಸಿಕೊಂಡು ಬಂದಿದ್ದೇವೆ ಎಂದರು. ಅಲ್ಲದೇ ದುಷ್ಟ ಸಂಹಾರವಾಗುತ್ತದೆಂಬ ಶೋಭಾ ಕರಂದ್ಲಾಜೆ ಟೀಕೆಗೆ ಪ್ರತ್ಯುತ್ತರ ನೀಡಿದ ಅವರು ಪೋಕ್ಸೊ ಕೇಸನಲ್ಲಿ ಸಿಕ್ಕಿ ಹಾಕಿಕೊಂಡ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಮೊದಲೂ ಈ ಮಾತನ್ನು ಹೇಳಲಿ ಎಂದರು.

ಇನ್ನು ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ನೀಡಿದ ಹೇಳಿಕೆಗೆ ಸರ್ಕಾರ ತನ್ನ ಕೆಲಸ ಮಾಡುತ್ತಿದೆ. ಬಿಜೆಪಿ ಸುಳ್ಳು ವಿಚಾರಕ್ಕೆ ಹೋರಾಟ ಮಾಡುತ್ತದೆ. ಸತ್ಯ ವಿಚಾರಕ್ಕೆ ಯಾವತ್ತೂ ಮಾಡುವುದಿಲ್ಲ ಎಂದರು.

Tags:

error: Content is protected !!