Vijaypura

ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು: ಬಹಳ ಪವರ್ ಫುಲ್ ದೇವಿಯನ್ನು ನಂಬಿ ಕೆಟ್ಟವರಿಲ್ಲ

Share

ಹಬ್ಬಗಳು ಎಂದ್ರೆ ಕಾಲನಿ ಅಥವಾ ಬಡಾವಣೆ ಒಗ್ಗಟ್ಟು ಪ್ರದರ್ಶಿಸಿ ಎಲ್ಲರೂ ಸಂತೋಷದಿಂದ ಹಬ್ಬ ಆಚರಿಸಲಾಗುತ್ತದೆ. ವಿಜಯಪುರ ನಗರದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಪ್ರತಿ ಬಡಾವಣೆಗಳು ಕಲರ್ ಫುಲ್ ಆಗಿವೆ. ಪ್ರತಿ ಬಡಾವಣೆಯಲ್ಲಿ ಅಬಾಲ ವೃದ್ದರಾಗಿ ಜಗನ್ಮಾತೆ ಆರಾಧನೆ ಮಾಡುತ್ತಿದ್ದಾರೆ. ಹೀಗೆಯೇ ಇಲ್ಲೊಂದು ಬಡಾವಣೆಯಲ್ಲಿ ನಾಡದೇವಿ ಮಂಡಳಿ ನವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ನವರಾತ್ರಿ ಹಬ್ಬವು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಐತಿಹಾಸಿಕ ನಗರಿ ವಿಜಯಪುರ ದಲ್ಲಿ ಪ್ರತಿ ಬಡಾವಣೆ ಯಲ್ಲಿ ದೇವಿ ಆರಾಧನೆ ಶ್ರದ್ಧೆಯಿಂದ ನಡೆಯುತ್ತಿದೆ‌. ನಗರದ ಗ್ಯಾಂಗ್ ಬೌಡಿಯ ಕಕ್ಕಯ್ಯಾ ಕಾಲೋನಿಯಲ್ಲಿ ನಾಡದೇವಿ ತರುಣ ಮಂಡಳಿ ವತಿಯಿಂದ ಕಳೆದ 32 ವರ್ಷಗಳಿಂದ ಸತತವಾಗಿ ನವರಾತ್ರಿ ಆಚರಿಸಲಾಗುತ್ತಿದೆ. ಇಲ್ಲಿನ ದೇವಿ ಮೂರ್ತಿ ಚಿಕ್ಕದಾದ್ರೂ ಬಹಳ ಪವರ್ ಫುಲ್ ಎನ್ನುವ ನಂಬಿಕೆ ಇಲ್ಲಿಯ ಭಕ್ತರದ್ದು. ಕಷ್ಟ ಅಂತಾ ಹರಕೆ ಹೊತ್ತವರ ಕಷ್ಟ ಕೊಟಲೆ ನಿವಾರಣೆ ಮಾಡುತ್ತಾಳೆ ಎಂಬ ನಂಬಿಕೆಯಿಂದ ಕಳೆದ 14 ವರ್ಷಗಳಿಂದ ದೇವಿ ಮೂರ್ತಿಯನ್ನು ಬದಲಾಯಿಸದೇ ಪ್ರತಿಷ್ಟಾಪನೆ ಮಾಡುತ್ತಿದ್ದಾರೆ. ಒಂಭತ್ತು ದಿನಗಳ ಕಾಲ ಮುಂಜಾನೆ ಹಾಗೂ ರಾತ್ರಿ ಮಂಗಳಾರತಿಗೆ ಬಡಾವಣೆ ಮಹಿಳೆಯರು, ಚಿಣ್ಣರು ಆಗಮಿಸಿ ಮಂಗಳಾರತಿ, ಪೂಜೆ ಪುರಸ್ಕಾರಗಳಲ್ಲಿ ತೊಡಗುತ್ತಾರೆ‌. ಇನ್ನೂ ಮಹಿಳೆಯರು ಚಿಣ್ಣರು ಪ್ರತಿ ದಿನ ನವರಾತ್ರಿಯ ಕಲರ್ ಫುಲ್ ಸೀರೆ ಉಟ್ಟು ಸಂಭ್ರಮದಿಂದ ಆಚರಿಸುತ್ತಾರೆ.

ಇನ್ನೂ ಒಂಭತ್ತು ದಿನಗಳ ಕಾಲ ಪ್ರತಿ ರಾತ್ರಿ ಚಿಕ್ಕಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಕ್ರೀಡಾಸಕ್ತರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತಿದೆ.‌ ಅಲ್ಲದೆ ಮಹಿಳೆಯರು ಚಿಕ್ಕವರು ದೊಡ್ಡವರು ಎನ್ನದೇ ಸಾಂಪ್ರದಾಯಿಕ ದಾಂಡಿಯಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೊಂದು ವಿಶೇಷ ಎಂದರೆ ಅನ್ನ ಪ್ರಸಾದ ಎಂದರೆ ಬಫೆ ಸಿಸ್ಟಮ್ ಪಾಲಿಸದೇ ಹಳೆಯ ಸಂಪ್ರದಾಯದಂತೆ ಕುಳ್ಳಿರಿಸಿ ಐದು ಸಾವಿರ ಭಕ್ತರಿಗೆ ಪ್ರಸಾದ ವಿತರಿಸುವಲ್ಲಿ ಕಕ್ಕಯ್ಯಾ ಕಾಲೋನಿ, ಜಯನಗರ ಕಾಲೋನಿ ಯುವ ಉತ್ಸಾಹಿ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇನ್ನೂ ಕಾಲೋನಿಯಲ್ಲಿ ಮಹಿಳೆಯರಿಗೆ, ಬಾಲ‌ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಗಳು ಸಂಭ್ರಮದಿಂದ ನಡೆದವು.

ಒಟ್ಟಾರೆ ನವರಾತ್ರಿ ಹಬ್ಬವು ಬಡಾವಣೆ ಅಥವಾ ಕಾಲೋನಿಯ ಒಗ್ಗಟ್ಟು ಪ್ರದರ್ಶಿಸಲು ಹಾಗೂ ಸಮಾನತೆ ತರುವಲ್ಲಿ ಸಹಕಾರಿಯಾಗುತ್ತಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ

Tags:

error: Content is protected !!