Banglore

ನಾನು ಸಿಎಂ ಆಕಾಂಕ್ಷಿಯಲ್ಲ – ಸಚಿವ ಕೆ.ಎಚ್.ಮುನಿಯಪ್ಪ

Share

ರಾಜ್ಯದಲ್ಲಿ ದಲಿತ ಸಿಎಂ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಆದರೆ ನಾನು ಸಿಎಂ ರೇಸ್ ನಲ್ಲಿ ಇಲ್ಲ ಎಂದು ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ. ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆ.ಎಚ್.ಮುನಿಯಪ್ಪ ರಾಜ್ಯದಲ್ಲಿ ದಲಿತ ನಾಯಕರನ್ನೇ ಸಿಎಂ ಆಗಿ ಮಾಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಲದಿಂದ ಈ ಮಾತು ಕೇಳಿ ಬರುತ್ತಿದೆ. ಅವರಿಗಿಂತ ಸೀನಿಯರ್ ಲೀಡರ್ ಇದ್ದಿಲ್ಲ, ಈ ರೀತಿ ಯೋಜನೆ ತಂದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಖರ್ಗೆ ಬಿಟ್ಟರೆ ಈಗ ರಾಜ್ಯದಲ್ಲಿ ಯಾರು ಸಿನಿಯರ್ ಲೀಡರ್ ಎಂದು ಕೆ.ಎಚ್. ಮಾರ್ಮಿಕವಾಗಿ ಪ್ರಶ್ನೆ ಮಾಡಿದ್ದು, ಇಲ್ಲಿಯವರೆಗೆ ಪಕ್ಷದಲ್ಲಿ ಸಿಎಂ ಬದಲಾವಣೆ ಪರಿಸ್ಥಿತಿ ಬಂದಿಲ್ಲ. ಅಂತಹ ಪರಿಸ್ಥಿತಿ ಬಂದರೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಮುನಿಯಪ್ಪ ಸ್ಪಷ್ಟನೆ ನೀಡಿದರು..

ಚಿತ್ರದುರ್ಗದಲ್ಲಿ ಐಕತ್ಯಾ ಸಮಾವೇಶ ಮಾಡಿದ ಮೇಲೆ ಎಸ್ಸಿ, ಎಸ್ಟಿ ಸಂಪೂರ್ಣವಾಗಿ ಕಾಂಗ್ರೆಸ್ ಪರವಾಗಿ ನಿಂತಿತು, ಈ ವೇಳೆ ಬಿಜೆಪಿ ಸಂವಿದಾನ ಬದಲಾವಣೆ ಮಾಡುತ್ತಾರೆ ಎಂಬ ಭಯವಿತ್ತು, ಆದರೆ ಶೋಷಿತ ಸಮುದಾಯ ಸಂಪೂರ್ಣವಾಗಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿತ್ತು ಎಂದರು.

ಶೋಷಿತ ಸಮುದಾಯ ಕಾಂಗ್ರೆಸ್ ಪರ ನಿಂತ ಹಿನ್ನಲೆ ರಾಜ್ಯದಲ್ಲಿ 136 ಸ್ಥಾನ ಗೆಲ್ಲಲ್ಲು ಸಾಧ್ಯವಾಯಿತು. ಐಕತ್ಯಾ ಸಮಾವೇಶ ಮೂಲಕ ಜನರಿಗೆ ಒಂದು ಸಂದೇಶವನ್ನು ನೀಡಲಾಗಿದೆ. ದಲಿತ ಸಿಎಂ ಮಾಡುವ ವಿಷಯ ವನ್ನು ಹೈಕಮಾಂಡ್ ಗೆ ಬಿಟ್ಟುಬಿಡೋಣ, ಸಿಎಂ ಪರವಾಗಿ ಶಾಸಕರು ಇದ್ದರೆ, ನಾವೆಲ್ಲಾ ಅವರನ್ನು ಬಲಗೋಳಿಸೋಣ, ಬಿಜೆಪಿ ಹುನ್ನಾರಕ್ಕೆ ಪಾಠ ಕಲಿಸೋಣ ಎಂದು ಹೇಳಿದರು.

Tags:

error: Content is protected !!