Vijaypura

ಬಡ್ಸ್ ಕಾಯ್ದೆ ಉಲ್ಲಂಘನೆ ಮಾಡಿದರೆ ರಾಜ್ಯ ಬಂದ್ ಗೆ ಕರೆ – ಸಂಗಮೇಶ ಸಗರ

Share

ಅಗ್ರಿಗೊಲ್ಡ್, ಪಿ.ಎ.ಸಿ.ಎಲ್, ಸಮೃದ್ಧ ಜೀವನ ಸೇರಿದಂತೆ ಇನ್ನಿತರ ಕಂಪನಿಗಳಲ್ಲಿ ಕಷ್ಟಪಟ್ಟು ದುಡಿದಿರುವ ಬಡವರು ಹಾಗು ರೈತರ ಹಣ 6 ವರ್ಷದಲ್ಲಿ ದ್ವೀಗುಣವಾಗುತ್ತದೆ ಎಂಬ ನಂಬಿಕೆ ಯೊಂದಿಗೆಹೂಡಿಕೆ ಮಾಡಿದ್ದರು, ಆದರೆ ಕೇಂದ್ರ ಸರಕಾರ ಏಕಾಏಕಿ 185 ಚಿಟ್ ಫಂಡ್ ಕಂಪನಿಗಳನ್ನು ಬಂದ್ ಮಾಡಿ ಆದೇಶ ಹೂರಡಿಸಿರುವ ಹಿನ್ನಲೆಯಲ್ಲಿ ಎಲ್ಲಾ ಹೂಡಿಕೆದಾರರು ಚಿಂತೆ ಮಾಡುವಂತೆ ಮಾಡಿದೆ ಈ ಕುರಿತು ಸರಕಾರ ಮಧ್ಯಸ್ಥಿಕೆ ವಹಿಸಿ ಹಣ ಹಿಂತುರಗಿಸಲು ಆದೇಶ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

ಕಳೆದ 20 ದಿನಗಳಿಂದ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದ ವತಿಯಿಂದ ನಡೆಸಿರುವ ಹೋರಾಟಕ್ಕೆ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಅವರು ರೈತ ಸಂಘದೊಂದಿಗೆ ಬೆಂಬಲ ನೀಡಿ ಮಾತನಾಡುತ್ತಾ ನಮ್ಮ ಜಿಲ್ಲೆಯಲ್ಲಿ ಅಂದಾಜು 2 ಲಕ್ಷ ಗ್ರಾಹಕರು ಸುಮಾರು 350 ಕೋಟಿ ರೂ ಗಳ ಹಣವನ್ನು ಹೂಡಿಕೆ ಮಾಡಿರುವ ಸಾರ್ವಜನಿಕರು, ರೈತರು, ಮಧ್ಯಮ ವರ್ಗದ ಜನರು ಎಲ್ಲಿ ಹೋಗಬೇಕು, ಈ ಚಿಟ್ ಫಂಡ್ ಕಂಪನಿಗಳಿಗೆ ಅನುಮತಿ ನೀಡಿ ಅವುಗಳಿಂದ ಹಣ ಠೇವಣಿ ಮಾಡಿಸಿಕೊಂಡಿರುವ ಸರಕಾರ ಈಗ ಕಂಪನಿಯ ಆಸ್ತಿಯನ್ನು ಹರಾಜು ಮಾಡಿ ಹೂಡಿಕೆದಾರರಿಗೆ ಹಣ ನೀಡಬೇಕು ಎಂದು ಆಗ್ರಹಿಸಿದರು. ಇದೇ ತರಹನಾಗಿ ರಾಜ್ಯವ್ಯಾಪಿ ಅಂದಾಜು 40 ಸಾವಿರ ಕೋಟಿ ಹಣ ಹೂಡಿಕೆ ಮಾಡಿದ್ದಾರೆ, ದೇಶವ್ಯಾಪಿ ಅಂದಾಜು 4 ಲಕ್ಷ 20 ಸಾವಿರ ಕೋಟಿ ಹಣ ಹೂಡಿಕೆ ಮಾಡಿದ್ದಾರೆ, ಈಗ ಕೇಂದ್ರ ಸರಕಾರ ದೇಶವ್ಯಾಪಿ 3 ಲಕ್ಷ ಖಾಸಗಿ ಕಂಪನಿಗಳನ್ನು ಏಕಾಏಕಿ ಬಂದ ಮಾಡಿದ್ದಾರೆ, ವಂಜನೆಗೊಳಗಾದ ಸಂತ್ರಸ್ತರು ಕಳೆದ 10 ವರ್ಷಗಳಿಂದ ನ್ಯಾಯಕ್ಕಾಗಿ ಸರಕಾರಕ್ಕೆ ಮನವಿ ಮಾಡುತ್ತಾ ಬಂದಿರುತ್ತಾರೆ, ಆದರೆ ಇಲ್ಲಿಯವರೆಗೆ ಸರಕಾರದ ಯಾವುದೇ ಅಧಿಕಾರಿಗಳು ಕಿಂಚಿತ್ತು ಕಾಳಜಿ ಮಾಡದೇ ಇರುವುದು ಹೂಡಿಕೆದಾರರಿಗೆ ಚಿಂತೆ ಮಾಡುವಂತೆ ಮಾಡಿದೆ, ಹೂಡಿಕೆದಾರರು ಏಜೆಂಟಗಳಿಗೆ ಹಣ ಕೊಡಿಸಿ ಎಂದು ನಿತ್ಯ ಕಿರಿ ಕಿರಿ ಮಾಡುವುದರಿಂದ ಮನನೊಂದ ಎಷ್ಟೊ ಜನ ಆತ್ಮಹತ್ಯೆ ಮಾಡಿಕೊಡಿರುವ ಘಟನೆಗಳು ನಡೆದಿವೆ.

6 ವರ್ಷಗಳಲ್ಲಿ ಹಣ ದ್ವೀಗುಣ ಮಾಡಿಕೊಡುವುದಾಗಿ ಹೇಳಿರುವ ಚಿಟ್ ಫಂಡ್ ಕಂಪನಿಗಳು ಸಾವಿರಾರು ಕೋಟಿ ಹಣ ಮಾಡಿಕೊಂಡು ಸಾರ್ವಜನಿಕರಿಗೆ ಮೊಸ ಮಾಡಿರುವುದು ಮೇಲ್ನೊಟಕ್ಕೆ ಕಾಣ ಬರುತ್ತದೆ, ಬಡ್ಸ್ ಕಾಯಿದೆ ಪ್ರಕಾರ 6 ತಿಂಗಳಲ್ಲಿ ಹಣ ಮರಳಿ ನೀಡಬೇಕು, ಕಂಪನಿಗಳು ಹಣ ಕೊಡದಿದ್ದರೆ ಸರಕಾರವೇ ಮಧ್ಯ ಪ್ರವೇಶಿಸಿ ಹಣ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಆದರೆ ಸರಕಾರ ಈ ಈ ಹೋರಾಟವನ್ನು ಬಗ್ಗು ಬಡೆಯುವ ಪ್ರಯತ್ನ ಮಾಡುತ್ತಿದೆ. ರಾಜ್ಯದ ಎಲ್ಲಾ 185 ಚಿಟ್ ಫಂಡ್ ಕಂಪನಿಗಳ ಸ್ತೀರಾಸ್ತಿ ಹಾಗೂ ಜಮಾವಾಣೆಯ ಹಣವನ್ನು ಕಾನೂನು ಬದ್ದವಾಗಿ ಹರಾಜು ಪ್ರಕ್ರಿಯೇ ಕೈಕೊಂಡು ಹೂಡಿಕೆದಾರರಿಗೆ ಹಣವನ್ನು ಮರಳಿ ಕೊಡಬೇಕು ಇಲ್ಲದಿದ್ದ ಪಕ್ಷದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಈ ಹೋರಾಟವನ್ನು ಬೆಂಬಲಿಸಿ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಈ ಮೂಲಕ ಒತ್ತಾಯಿಸುತ್ತೆವೆ ಎಂದರು.

ಈ ವೇಳೆ ವಿಜಯಪುರ ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷರಾದ ಸಂಗಪ್ಪ ಚಲವಾದಿ (ಟಕ್ಕೆ), ವಿಜಯಪುರ ತಾಲೂಕಾ ಅಧ್ಯಕ್ಷರಾದ ಮಹಾದೇವಪ್ಪ ತೇಲಿ, ವಿಜಯಪುರ ತಾಲೂಕಾ ಉಪಾಧ್ಯಕ್ಷರಾದ ಪ್ರಕಾಶ ತೇಲಿ, ಆಹೇರಿ(ಜ) ಅಧ್ಯಕ್ಷರಾದ ಆತ್ಮಾನಂದ ಭೈರೋಡಗಿ, ತಿಪ್ಪರಾಯ ಭೈರೋಡಗಿ, ತಿಪ್ಪರಾಯ ಭೈರೋಡಗಿ, ತುಕಾರಾಮ ಡೋಲಸೆ, ರಾಮಣ್ಣ ಹೊಸಮನಿ, ಅಮೋಗಿ ವಾಡೇದ, ಚಂದ್ರಾಮ ಬೀಸನಾಳ , ಜಯಸಿಂಗ ರಜಪೂತ , ರಾಮಣ್ಣ ದೇವೂರ ಮಹಾದೇವ ದೇವೂರ , ಚನ್ನಪ್ಪಾ ವಾಡೇದ, ಮಹಾದೇವ ವಾಲಿ, ಸಂಗನಗೌಡ ಬಿರಾದಾರ, ಬಸನಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಸಂಗನ ಬಸಪ್ಪಗೌಡ ಪಾಟೀಲ, ಬಸನಗೌಡ ಚ ಬಿರಾದಾರ, ಮಲ್ಲು ಬಾಗೇವಾಡಿ, ಪರಶುರಾಮ ದೇವೂರ, ಆತ್ಮಾನಂದ ದೇವೂರ, ಚನ್ನು ವಾಲಿ, ಲಾಯಪ್ಪ ವಾಘೆ, ಶಂಕರ ವಾಘೆ ಸೇರಿದಂತೆ ಅನೇಕರು ಇದ್ದರು.

Tags:

error: Content is protected !!