Chikkodi

ಶಿಕ್ಷಕರು ಮಕ್ಕಳಿಗೆ ನಗುನಗುತ್ತಲೆ ಪಾಠ ಮಾಡಬೇಕು : ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ಪುರಸ್ಕೃತೆ ಶಿಕ್ಷಕಿ ಪದ್ಮಶ್ರೀ ರೂಗೆ

Share

ಚಿಕ್ಕೋಡಿ-“ಶಿಕ್ಷಕರು ಮಕ್ಕಳಿಗೆ ಗುರಿ ಬಗ್ಗೆ ಹೇಳಿಕೊಡಬೇಕು. ಮಕ್ಕಳಲ್ಲಿ ಏಕಾಗ್ರತೆ ಮೂಡಿಸಬೇಕು ನಗು ನುಗತ್ತಲೇ ಪಾಠ ಮಾಡಬೇಕು. ಆಗಲೇ ಮಕ್ಕಳ ಹೃದಯದಾಳದಲ್ಲಿ ಪ್ರತಿಭೆ ಅರಳಲು ಸಾಧ್ಯವಾಗುತ್ತದೆ”ಎಂದು 2024ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ಪುರಸ್ಕøತ ಶಿಕ್ಷಕಿ ಪದ್ಮಶ್ರೀ ರೂಗೆ ಹೇಳಿದರು.

ಚಿಕ್ಕೋಡಿ ಪಟ್ಟಣದ ಆರ್ ಡಿ ಹೈಸ್ಕೂಲ್ ನ ಧೋಂಡಿರಾಜ್ ಸಭಾ ಭವನದಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ರಾಷ್ಟ್ರ ನಿರ್ಮಾಣ ಪ್ರಶಸ್ತಿಯನ್ನು ಶಿಕ್ಷಕರಿಗೆ ವಿತರಿಸಿ ಮಾತನಾಡಿ, “ಮಕ್ಕಳು ಅಮೂಲ್ಯ ರತ್ನಗಳು. ಅನರ್ಘ್ಯ ರತ್ನಗಳಲ್ಲಿ ಹುದುಗಿದ ಅಧಮ್ಯ ಶಕ್ತಿಯನ್ನು ಹೊರ ತರುವುದೇ ಶಿಕ್ಷಕರ ಗುರಿಯಾಗಿರಬೇಕು. ಹಾಗಾಗಿ ವಿಶ್ರಾಂತಿಯನ್ನು ಪಡೆದುಕೊಳ್ಳದೇ ಕೆಲಸದಲ್ಲಿ ಬದಲಾವಣೆ ಮಾಡುವ ಮೂಲಕ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕೆಂದರು.

ಪ್ರಶಸ್ತಿ ಸ್ವೀಕರಿಸಿ ಶಿಕ್ಷಕ ಉಮೇಶ ತೋಟದ ಮಾತನಾಡಿ, ” ತಂದೆ ತಾಯಿಯ ಅನತಿಯಂತೆ ನಾವು ನಡೆಯಬೇಕು. ಹಿರಿಯರನ್ನು ಗೌರವಿಸಬೇಕು. ಶಿಕ್ಷಕರನ್ನು ಮಕ್ಕಳು ಅನುಕರಣೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕರು ನಡೆಯಬೇಕು ಎಂದು ಹೇಳಿದರು. ವಿವಿಧ ಶಾಲೆಗಳಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸಿ ವಿಶೇಷ ಸಾಧನೆ ಮಾಡಿದ 13 ಜನ ಶಿಕ್ಷಕರನ್ನು ಗುರುತಿಸಿ ರೋಟರಿ ಕ್ಲಬ್ ನಿಂದ “ರಾಷ್ಟ್ರ ನಿರ್ಮಾಣ ಪ್ರಶಸ್ತಿ”ಯನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಚಿಕ್ಕೋಡಿ ರೋಟರಿ ಕ್ಲಬ್ ಅಧ್ಯಕ್ಷ ಶಿರಿಶ್ ಮೇಹತಾ, ಕಾರ್ಯದರ್ಶಿ ಶ್ರೀಧರ ಗಜ್ಜನ್ನವರ, ಅರುಣ ಮಾಳಿ, ರಾಜ್ ಜಾಧವ, ಜಯಶ್ರೀ ಕುಲಕರ್ಣಿ, ಸಂಕೇತ ಮಾಂಜರೇಕರ, ಆನಂದ ಅರವಾರೆ ಮುಂತಾದವರು ಇದ್ದರು.

Tags:

error: Content is protected !!