hubbali

ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ವಿಸರ್ಜನೆಗೊಂಡ 11 ದಿನ ಸಾರ್ವಜನಿಕ ಗಣೇಶ್ ಮೂರ್ತಿಗಳು

Share

ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಸಾರ್ವಜನಿಕ ಮೆರವಣಿಗೆಯ ಮೂಲಕ ಗಣೇಶನಿಗೆ ಭಾವನಾತ್ಮಕವಾಗಿ ವಿದಾಯ ಹೇಳಲಾಯಿತು. 11 ದಿನಗಳವರೆಗೆ ಪ್ರತಿಷ್ಠಾಪಿಸಿದ್ದ ಸುಮಾರು 100ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.

ಹುಬ್ಬಳ್ಳಿಯ ಮರಾಠಗಲ್ಲಿ, ಮೇದಾರ ಓಣಿ, ಶಕ್ತಿ ನಗರ, ಪೆಂಡಾರ ಗಲ್ಲಿ, ದಾಜಿಬಾನ್ ಪೇಟೆ ಸೇರಿದಂತೆ ವಿವಿಧೆಡೆ ಪ್ರದೇಶಗಳಲ್ಲಿ ಪ್ರತಿಷ್ಠಾಪನೆಯಾಗಿದ್ದ ಬೃಹತ್ ಗಣೇಶ ಮೂರ್ತಿಗಳ ಮೆರವಣಿಗೆ ಜನರ ಗಮನ ಸೆಳೆಯಿತು.

ಎಲ್ಲಿ ನೋಡಿದರೂ ಲೇಸರ್ ಬೆಳಕು, ಬೃಹತ್ ಡಿಜೆ, ವಾದ್ಯಗಳ ಸದ್ದಿಗೆ ಯುವಕ, ಯುವತಿಯರು, ವೃದ್ಧರು ಕುಣಿದು, ಕುಪ್ಪಳಿಸಿದರು. ರಾತ್ರಿ ಹತ್ತು ಗಂಟೆಯವರಿಗೆ ಡಿಜೆಗೆ ಅವಕಾಶ ನೀಡಲಾಗಿತ್ತು. ಪೊಲೀಸ್ ಇಲಾಖೆಯಿಂದ ಭಾರಿ ಭದ್ರತೆ ಕೈಗೊಳ್ಳಲಾಗಿತ್ತು.

ನಗರದ ಮರಾಠಾಗಲ್ಲಿ, ದಾಜೀಬಾನ್ ಪೇಟ್‍ದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚೆನ್ನಮ್ಮ ವೃತ್ತದ ಮೂಲಕ ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆ ಸಾಗಿ, ಇಂದಿರಾ ಗಾಜಿ ಮನೆಯ ಪಕ್ಕದಲ್ಲಿರುವ ಬಾವಿ ಹಾಗೂ ಹೊಸೂರಿನಲ್ಲಿರುವ ಬಾವಿಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು.

ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಗಣೇಶ ಮೂರ್ತಿ ಮೆರವಣಿಗೆ ಬಂದೋಬಸ್ತ್ ನ ಉಸ್ತುವಾರಿ ವಹಿಸಿದ್ದರು.

Tags:

error: Content is protected !!