Hukkeri

ವಿಶ್ವ ರೂಪಿಸಲು ವಿಶ್ವಕರ್ಮರ ಕೊಡುಗೆ ಅಪಾರ – ಪುರಸಭೆ ಅದ್ಯಕ್ಷ ಇಮ್ರಾನ್ ಮೋಮಿನ

Share

ಹುಕ್ಕೇರಿ : ವಿಶ್ವದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಪುರಸಭೆ ಅದ್ಯಕ್ಷ ಇಮ್ರಾನ್ ಮೋಮಿನ ಹೇಳಿದರು. ಅವರು ಇಂದು ಹುಕ್ಕೇರಿ ನಗರದಲ್ಲಿ ವಿಶ್ವ ಕರ್ಮ ಸಮೂದಾಯ ಹಮ್ಮಿಕೊಂಡ ವಿಶ್ವ ಕರ್ಮರ ಭಾವ ಚಿತ್ರದ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು. ಹುಕ್ಕೇರಿ ನಗರದ ಅಡವಿ ಸಿದ್ಧೇಶ್ವರ ಮಠದ ಆವರಣದಲ್ಲಿ ಸಮಾಜದ ಅದ್ಯಕ್ಷ ಗಜಾನನ ಬಡಿಗೇರ ಮತ್ತು ಪುರಸಭೆ ಉಪಾದ್ಯೆಕ್ಷೆ ಜ್ಯೋತಿ ಬಡಿಗೇರ ವಿಶ್ವ ಕರ್ಮರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮೇರವಣೆಗೆ ಚಾಲನೆ ನೀಡಿದರು.

ನಂತರ ಮಾದ್ಯಮ ಗಳೊಂದಿಗೆ ಮಾತನಾಡಿದ ಕೆ ಎ ಬಡಿಗೇರ ವಿಶ್ವಕರ್ಮರು ಎಲ್ಲಾ ವರ್ಗದ ಜನರಿಗೆ ವಾಸ್ತು ಶಿಲ್ಪದ ಮೂಲಕ ತನ್ನ ಕಲೆಯನ್ನು ಗುರುತಿಸಿ ಎಲ್ಲ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಅವರ ಜಯಂತಿ ಮಾಡುತ್ತಿರುವದು ಹರ್ಷವಾಗುತ್ತದೆ ಎಂದರು

ಟ್ರಸ್ಟ್ ಅದ್ಯಕ್ಷ ಕೆ ಬಿ ಬಡಿಗೇರ ಮಾತನಾಡಿ  ವಿಶ್ವಕರ್ಮರ ಜಯಂತಿಯನ್ನು ಪ್ರತಿ ವರ್ಷ ಸರ್ಕಾರದ ಮಟ್ಟದಲ್ಲಿ ಆಚರಿಸುವದು ಸಂತೋಷದ ಸಂಗತಿ ,ಜಾತಿ ಮತ ಭೇದ ವಿಲ್ಲದೆ ಜಗತ್ತಿನಲ್ಲಿ ಹಲವಾರು ಸುಂದರವಾದ ಇತಿಹಾಸ ಪ್ರಸಿದ್ಧ ಕಟ್ಟಡ ನಿರ್ಮಾಣ ಮಾಡಿದ ಶಿಲ್ಪಕಾರರ ಕೋಡುಗೆ ಅಪಾರವಾಗಿದೆ ಕಾರಣ ಇಂದು ಇಡಿ ದೇಶ ವಿಶ್ವ ಕರ್ಮರ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದರು
ಮೇರವಣೆಗೆಯು ವಾದ್ಯ ಮೇಳಗಳೊಂದಿಗೆ ನಗರದ ಮುಖ್ಯ ರಸ್ತೆಗಳ ಮೂಲಕ ಸಂಚರಿಸಿ ಆಡಳಿತ ಸೌಧದಲ್ಲಿ ಸಭೆಯಾಗಿ ಮಾರ್ಪಟ್ಟಿತು.

ಈ ಸಂದರ್ಭದಲ್ಲಿ ಗ್ರೇಡ ೨ ತಹಸಿಲ್ದಾರ ಪ್ರಕಾಶ ಕಲ್ಲೋಳಿ, ಬಿ ಇ ಓ ಪ್ರತಿಭಾ ಪಾಟೀಲ, ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ, ವಿಶ್ವ ಕರ್ಮ ಸಮಾಜದ ಮುಖಂಡರಾದ ಗಜಾನನ ಬಡಿಗೇರ, ಕೆ ಬಿ ಬಡಿಗೇರ, ನಾರಾಯಣ ಬಡಿಗೇರ, ಮಹಾದೇವ ಬಡಿಗೇರ, ಅಜೀತ ಬಡಿಗೇರ, ಸಂತೋಷ ಬಡಿಗೇರ, ಗಣಪತಿ ಬಡಿಗೇರ, ಅಶೋಕ ಬಡಿಗೇರ, ದತ್ತಾ ಬಡಿಗೇರ ಮೊದಲಾದವರು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!