ಬೆಳಗಾವಿಯ ಗಾಂಧಿನಗರ ಬ್ರಿಜ್ ಬಳಿ ಮಾರುತಿ 800 ಕಾರಿಗೆ ಏಕಾಏಕಿ ಬೆಂಕಿ ತಗುಲಿ ಕ್ಷಣಾರ್ಧದಲ್ಲೇ ಸುಟ್ಟು ಭಸ್ಮವಾದ ಘಟನೆ ನಡೆದಿದೆ .
ಬೆಳಗಾವಿಯ ಗಾಂಧಿನಗರದ ಬ್ರಿಜ್ ಮೇಲೆ ಹಲಗಾ ಮಾರ್ಗವಾಗಿ ಸಂಚರಿಸುತ್ತೀದ್ದ ಮಾರುತಿ 800 ಕಾರಿಗೆ ಏಕಾಏಕಿ ಬೆಂಕಿ ತಗುಲಿ ಧಗಧಗನೆ ಸುಟ್ಟು ಕ್ಷಣಾರ್ಧದಲ್ಲೇ ಭಸ್ಮವಾದ ಘಟನೆ ನಡೆದಿದೆ . ಈ ಕಾರಿನಲ್ಲಿ ಇಬ್ಬರೂ ಜನ ಪ್ರಯಾಣಿಸುತ್ತಿದ್ದರು. ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣ ಅವರು ಕಾರಿನಿಂದ ಕೆಳಗಿಳಿದು, ಅವಘಡದಿಂದ ಬಚಾವ್ ಆಗಿದ್ಧಾರೆ.