Gadag

ನದಿಗೆ ಬಿದ್ದ ಕುರಿಗಾಯಿಯನ್ನು ರಕ್ಷಿಸಿದ ಮೀನುಗಾರರು

Share

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕುರಿಗಾಯಿಯನ್ನ ರಕ್ಷಣೆ ಮಾಡಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾ. ಕೊರ್ಲಹಳ್ಳಿ ಬಳಿ ನಡೆದಿದೆ.  ಗದಗದಲ್ಲಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕುರಿಗಾಯಿಯನ್ನ ರಕ್ಷಣೆ ಮಾಡಲಾಗಿದೆ. ಗದಗ ಜಿಲ್ಲೆ ಮುಂಡರಗಿ ತಾ. ಕೊರ್ಲಹಳ್ಳಿ ಬಳಿ ಈ ಘಟನೆ ನಡೆದಿದ್ದು,ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾ. ಹೊನ್ನೂರು ಗ್ರಾಮದ ಕುರಿಗಾಯಿ ರಾಮಣ್ಣ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಮುಂಡರಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ವ್ಯಕ್ತಿ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದನ್ನು ಅಲ್ಲೇ ಇದ್ದ ಮೀನುಗಾರರು ಕಂಡು ತಕ್ಷಣ ರಕ್ಷಣೆಗೆ ಧಾವಿಸಿದ್ದಾರೆ. ತೆಪ್ಪದಲ್ಲಿ ಕುರಿಗಾಯಿ ಬಿದ್ದ ಸ್ಥಳಕ್ಕೆ ತೆರಳಿ, ನದಿಯಲ್ಲಿ ತೇಲಿ ಹೋಗುತ್ತಿದ್ದ ಕುರಿಗಾಯಿಯ ರಕ್ಷಣೆ ಮಾಡಿದ್ದಾರೆ.

ಈ ರೀತಿ ಆತ್ಮಹತ್ಯೆ ಯತ್ನಿಸಲು ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆತ್ಮಹತ್ಯೆಗೆ ಯತ್ನಿಸಿದ ಕುರಿಗಾಯನ್ನ ಪ್ರಾಣದ ಹಂಗು ತೊರೆದು ಮೀನುಗಾರರಿಂದ ರಕ್ಷಣೆ ಮಾಡಿದ್ದು, ಮೀನುಗಾರರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!