ರಾಮದುರ್ಗ ಸೆಪ್ಟೆಂಬರ್ ಮೂರರಂದು ತಪ್ಪದೆ ಎಲ್ಲಾ ಭಕ್ತರು ವೀರಭದ್ರೇ ಶ್ವರ ಜಯಂತಿಯನ್ನು ಆಚರಿಸಿ, ವೀರಭದ್ರೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಎಂ ಚಂದರಗಿ ಹಿರೇಮಠದ ತಪೋಭೂಷಣ ಶ್ರೀ ಷ ಬ್ರ ವಿರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಗೋಡಚಿ ಕ್ಷೇತ್ರದಲ್ಲಿ ವಿರಶೈವ ಲಿಂಗಾಯತ ಸಂಘಟನಾ ವೇದಿಕೆ ವಿರಭದ್ರೆಶ್ವರ ಜಯಂತಿ ಮಹೋತ್ಸವ ಸಮಿತಿ ಹಮ್ಮಿಕೊಂಡಿರುವ ವಿರಭದ್ರೇಶ್ವರ ಜಯಂತಿ ಮಹೋತ್ಸವದ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿರಭದ್ರೇಶ್ವರ ಜಯಂತಿ ಮಹೋತ್ಸವದ ರಾಷ್ಟ್ರೀಯ ಅಧ್ಯಕ್ಷರಾದ ಬಾಗೋಜಿಕೊಪ್ಪ ಹಿರೇಮಠದ ಷ ಬ್ರ ಡಾಕ್ಟರ್ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರು ವಿರಶೈವರ ಮೂರ ಪುರುಷ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿ ವಿರಭದ್ರೇಶ್ವರ ಜಯಂತಿಯನ್ನು ಎಲ್ಲರೂ ಆಚರಿಸುವ ಮುಖಾಂತರ ವಿರಭದ್ರನಿಗೆ ಭಕ್ತಿಯನ್ನು ಸಮರ್ಪಿಸಬೆಕೆಂದು ಕರೆ ನೀಡಿದರು.

ಇದೆ ಸಂದರ್ಭದಲ್ಲಿ ವಿರಭದ್ರೇಶ್ವರ ಜಯಂತಿ ಮಹೋತ್ಸವದ ರಾಜ್ಯಾಧ್ಯಕ್ಷರಾದ ಬಳ್ಳಾರಿ ಕಲ್ಯಾಣ ಮಠದ ಶ್ರೀ ಮ ನಿ ಪ್ರ ಕಲ್ಯಾಣ ಮಹಾಸ್ವಾಮಿಗಳವರು ಮಾತನಾಡಿ ವಿರಭದ್ರ ಮಹಾಸ್ವಾಮಿ ಜಯಂತಿಯನ್ನು ಆಚರಿಸಿದರೆ ಎಲ್ಲಾ ದೃಷ್ಟಿಗಳಿಂದ ಹೊರಬರಲು ಸಾಧ್ಯ ಏಕೆಂದರೆ ವಿರಭದ್ರ ಎಂದರೆ ಅವನು ಮಂಗಳಕರ ಎಂದರ್ಥ ಶಿವನ ಪುತ್ರನಾಗಿರುವ ವಿರಭದ್ರೇಶ್ವರ ಜಯಂತಿಯನ್ನು ಎಲ್ಲರೂ ಆಚರಿಸಿ ಎಂದರು.
ಈ ಸಂದರ್ಭದಲ್ಲಿ ಕುಂದರಗಿಯ ಶ್ರೀ ಶಿವಾಚಾರ್ಯ ಸ್ವಾಮೀಜಿಯವರು,ಉಗರಕೋಳದ ನಿರ್ವಾಣೇಶ್ವರಮಠದ ಡಾಕ್ಟರ್ ಮಹಾಂತ ಸ್ವಾಮಿಗಳು,ಚಿಪ್ಪಲಕಟ್ಟಿಯ ಕಲ್ಮೇಶ್ವರ ಸ್ವಾಮಿಗಳು,ಟಿ ಪಿ ಮುನ್ನೊಳಿ ,ಬಸಯ್ಯಾ ಹಿರೇಮಠ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು.
