ಮಹಾರಾಷ್ಟ್ರದಿಂದ ಉದ್ಯೋಗ ಅರಸಿ ಬಂದ ಕುಟುಂಬ ಸ್ವಲ್ಪದರಲ್ಲೇ ಬಚಾವ್ ಆದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಕಾರನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿ ಹೋಗಿವೆ.
ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಶಿರೋಳ ಗ್ರಾಮದಿಂದ ಚಿಕ್ಕೋಡಿ ತಾಲೂಕಿನ ಬಾನಂತಿಕೋಡಿಯ ತಾಯಿ ಮಕ್ಕಳ ಆಸ್ಪತ್ರೆ ಎದುರಿನಲ್ಲಿ ಟೆಂಟ್ ಹಾಕಲು ನಿಲ್ಲಿಸಲಾದ ಅಲೆಮಾರಿಗಳ ವ್ಯಾಗನರ್ ಕಾರಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಕಾರಿನಲ್ಲಿ ಜ್ಞಾನಸಿಂಗ್ ಕಲಾಸಿಂಗ್ ಚಿತೌಡ ಅವರ ಕುಟುಂಬ ಪ್ರಯಾಣಿಸುತ್ತಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ಕುಟುಂಬಸ್ಥರು ಕೆಳಗಿಳಿದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಸ್ವಲ್ಪದರಲ್ಲೇ ಅಲೆಮಾರಿಗಳ ಕುಟುಂಬ ಬಚಾವ್ ಆಗಿದೆ. ಆದರೇ ಕಾರಿನಲ್ಲಿಟ್ಟದ್ದ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.