Belagavi

ಬೆಳಗಾವಿಯಲ್ಲಿ ಸಿಲಿಂಡರ್ ಸ್ಪೋಟ ; ಮನೆ ಸಂಪೂರ್ಣ ಭಸ್ಮ

Share

ಬೆಳಗಾವಿಯ ಮಾರುತಿ ನಗರದ ಮಹಾವೀರ ಕಾಲೋನಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಸಂಪೂರ್ಣ ಮನೆ ಸುಟ್ಟು ಕರಕಲಾಗಿದೆ..

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಚನ್ನಪ್ಪ ವಿಠಲ ಲಮಾಣಿ ಎನ್ನುವರ ಮನೆಯಲ್ಲಿ ತಡರಾತ್ರಿ ಏಕಾಏಕಿ ಸಿಲಿಂಡರ್ ಸ್ಪೋಟವಾಗಿ ಸಂಪೂರ್ಣ ಮನೆ ಸುಟ್ಟು ಕರಕಲಾಗಿದೆ.

ಇನ್ನೂ ಈ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಕೂಲಿ ಕೆಲಸ ಮಾಡಿ ಮನೆಯಲ್ಲಿ ಇಟ್ಟಿದ 1.80 ಸಾವಿರ ನಗದು ಹಾಗೂ 35 ಗ್ರಾಂ ಚಿನ್ನ ಬೆಂಕಿ ಪಾಲಾಗಿದೆ.
ಇನ್ನೂ ಈ ಘಟನೆ ನಡೆದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ದಳದ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:

error: Content is protected !!