DAM

ಭರ್ತಿಯಾಗುವ ಅಂಚಿನಲ್ಲಿ ನವೀಲುತೀರ್ಥ ಜಲಾಶಯ; 4 ಕಸ್ಟರ್ ಗೇಟ್ ತೆರೆದು ಹೆಚ್ಚುವರಿ ನೀರು ಬಿಡುಗಡೆ

Share

ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಹಿನ್ನಲೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯ ಭರ್ತಿಯಾಗುವ ಅಂಚಿನಲ್ಲಿದೆ. ಈ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.

ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿನ ನವಿಲುತೀರ್ಥ ಜಲಾಶಯ 2079.50 ಅಡಿ ಇದ್ದು, ಈಗಾಗಲೇ 2072 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಇನ್ನು 7 ಅಡಿ ಬಾಕಿ ಇದೆ. ಮಲಪ್ರಭಾ ನದಿಗೆ 20,000 ಕ್ಯೂಸೆಕ್ಸ್ ಒಳಹರಿವು ಹಿನ್ನಲೆ ಮುಂಜಾಗೃತಾ ಕ್ರಮವಾಗಿ ನವೀಲುತೀರ್ಥ ಜಲಾಶಯದ 4 ಕಸ್ಟರ್ ಗೇಟಗಳನ್ನು ತೆರೆದು 1000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದೆ.

Tags:

error: Content is protected !!