hubbali

ರಾಜ್ಯ ಕಾಂಗ್ರೆಸ್ ಸರ್ಕಾರ ಕಡುಭ್ರಷ್ಟ ಸರ್ಕಾರ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ

Share

ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ತನ್ನ ಹೈಕಮಾಂಡ್ ಬೆಂಬಲದಿಂದ ಭಯಂಕರ ಭ್ರಷ್ಟಾಚಾರ ಶುರು ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು ರಾಹುಲ್ ಗಾಂಧಿಯವರ ಬೆಂಬಲದಿಂದ ಬಹುದೊಡ್ಡ ಭ್ರಷ್ಟಾಚಾರ ನಡೆಸಿದೆ. ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ಕೋಟಿ‌ ಕೋಟಿ‌ ಹಣ ಸಂಗ್ರಹ ಮಾಡಿದ್ದರು. ಈ‌ ಬಗ್ಗೆ ನಾನು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೆ. ಇಂದು ವಾಲ್ಮೀಕಿ ಅಭವೃದ್ದಿ ನಿಗಮದ ಭ್ರಷ್ಟಾಚಾರದಲ್ಲಿ ನೂರಾರು ಜನರಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದು ಸಂಪೂರ್ಣವಾಗಿ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರಗೆ ಗೊತ್ತಿದ್ದೇ ನಡೆದಿರೋ ಭ್ರಷ್ಟಾಚಾರವಾಗಿದ್ದು ಇದು 100 % ಭ್ರಷ್ಟಾಚಾರ ಸರ್ಕಾರ ಆಗಿದೆ ಎಂದು ಆರೋಪಿಸಿದರು.

ಕೋಟಿಗಟ್ಟಲೇ ಹಣ ಗೋಣಿ ಚೀಲದಲ್ಲಿ ತುಂಬಿಟ್ಟಿದ್ದಾರೆ . 40 ದಿನಗಳಾದ್ರೂ ಸಹ ನಾಗೇಂದ್ರಗೆ ಯಾವುದೇ ನೋಟೀಸ್ ನೀಡಿಲ್ಲ. ಈಗ ಈಡಿ‌ ಅಧಿಕಾರಿಗಳು ನಾಗೇಂದ್ರನನ್ನ ಬಂಧನ ಮಾಡಿದ‌ ಕೂಡಲೇ ದದ್ದಲ್ ತನ್ನನ್ನೂ ಬಂಧನ‌ ಮಾಡುವಂತೆ ದುಂಬಾಲು‌ ಬಿದ್ದಿದ್ದಾರೆ. ಈಡಿ ಅಧಿಕಾರಿಗಳಿಂದ ಬಂಧನವಾದ ಕೂಡಲೇ ನಾಟಕವಾಡುತ್ತಿದ್ದಾರೆ. ಸಿದ್ಧರಾಮಯ್ಯ ಸರ್ಕಾರ ಪರಮ‌ ಭ್ರಷ್ಟ ಸರ್ಕಾರ ಮುಡಾ‌ ಹಗರಣದಲ್ಲಿ ಸಿದ್ಧರಾಮಯ್ಯ ಅವರದ್ದೇ ನೇರ ಕೈವಾಡವಿದ್ದು. ಬಹಳ ವ್ಯವಸ್ಥಿತವಾಗಿ ಮುಡಾ‌ ದಲ್ಲಿ ಬಹುಬೆಲೆ ಬಾಳುವ ನಿವೇಶನ ಗುಳುಂ ಮಾಡಿದ್ದಾರೆ ಎಂದರು. ಬರೋಬ್ಬರಿ 14 ನಿವೇಶನಗಳನ್ನ ಗುಳುಂ ಮಾಡಿದ್ದಾರೆ.

ಸಿದ್ಧರಾಮಯ್ಯ ಒಬ್ಬ ಕರುಡ ಭ್ರಷ್ಟ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಸೂಕ್ತ ತನಿಖೆಯಾಗಬೇಕು. ಹಾಗೂ ಸಿದ್ಧರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ‌ ನೀಡಬೇಕೆಂದು. ಸಿದ್ಧರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಗಂಭೀರವಾಗಿ ಆರೋಪ ಮಾಡಿದ್ದಾರೆ.

Tags:

error: Content is protected !!