ಬೆಳಗಾವಿ ಪಾಲಿಕೆ ಆಯುಕ್ತ ಅಶೋಕ ದುಡುಗುಂಟಿ ನಗರದಲ್ಲಿ ಸಂಚರಿಸುವ ಮೂಲಕ ಕಾರ್ಮೀಕರ ಕಾರ್ಯ ಹಾಗೂ ಸ್ವಚ್ವತೆಯ ವೀಕ್ಷಣೆ ಮಾಡಿದರು.
ಬೆಳಿಗ್ಗೆ 6.00 ಸುಮಾರಿಗೆ ಸದಾಶಿವ ನಗರದ ಪಾಲಿಕೆಯ ವಾಹನ ಶಾಖೆಗೆ ಭೇಟಿ ನೀಡಿದ್ದರು. ಬಳಿಕ ಕಸ ವಿಲೇವಾರಿ ವಾಹನದಲ್ಲಿ ಸಂಚರಿಸಿ ಕಾರ್ಮೀಕರ ಕಾರ್ಯ ಹಾಗೂ ಸ್ವಚ್ವತೆ ಕುರಿತು ಪರಿಶೀಲಿಸಿದ್ದರು.
ನಂತರ ಮಾಹಾಂತೇಶ್ ನಗರ ಬಿಟ ಕಚೇರಿಗೆ ಹಾಗೂ ವೀರಭದ್ರನಗರ್ ಬೀಟ್ ಕಚೇರಿಗೆ ಭೇಟಿ ನೀಡಿ ಪೌರಕಾರ್ಮಿಕರ ಹಾಜರಾತಿ ಪರಿಶೀಲಿಸಿ, ಆರೋಗ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು . ನಂತರ ಅಶೋಕ್ ನಗರ ಸ್ವಿಮ್ಮಿಂಗ್ ಪೂಲ್ ಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಇತರ ಕಾರ್ಯಗಳನ್ನು ವೀಕ್ಷಿಸಿ ಸಂಬಂಧ ಪಟ್ಟವರಿಗೆ ನಿರ್ದೇಶನ ನೀಡಿದರು, ಹಾಗೂ ಕೋಟಿಗೆರೆಗೆ ಭೇಟಿ ನೀಡಿ ಸಂಪೂರ್ಣ ಕೋಟಿಗೆರೆ ವೀಕ್ಷಿಸಿ ಸಂಬಂಧಪಟ್ಟ ಗುತ್ತಿಗೆದಾರಿಗೆ ಪ್ರತಿದಿನ ಸ್ವಚ್ಛತಾ ಕಾರ್ಯ ಹಾಗೂ ಕಸ ವಿಲೇವಾರಿ ಮಾಡಲು ಸೂಚಿಸಿದರು…
ಖಡೇ ಬಜಾರ ಹಾಗೂ ನರಗುಂದಕರ್ ಬಾವೇ ಚೌಕ್ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿ ಸ್ವಚ್ಛತಾ ಕಾರ್ಯ ವೀಕ್ಷಿಸಿ ಹಾಗೂ ಹಾಳಾಗಿದ್ದ ರಸ್ತೆಯನ್ನು ಸರಿಪಡಿಸಲು ಸಂಬಂಧಪಟ್ಟವರಿಗೆ ಸೂಚಿಸಿದರು…