award

ಕೆನಡಾ ಪ್ರಶಸ್ತಿ ಪಡೆದು ಬೆಳಗಾವಿಯ ಕೀರ್ತಿ ಹೆಚ್ಚಿಸಿದ ತಾಂಡಾ ಮೂಲದ ನಿವಾಸಿ ಚೇತನ ಚವ್ಹಾಣ

Share

ಬೆಳಗಾವಿ ಚೇತನ ಚವ್ಹಾಣ ಪ್ರಸಕ್ತ ಸಾಲಿನ ಕೆನಡಾದ ಓಂಟಾರಿಯೋ ತಾಂತ್ರಿಕ ವಿಶ್ವವಿದ್ಯಾಲಯದ ಎಕ್ಸಲಂಟ್ ಪರ ಫಾರ್ಮರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಪ್ರಶಸ್ತಿಯು ಪ್ರಶಂಸಾ ಪತ್ರ ಮತ್ತು ಮೂವತ್ತು ಗ್ರಾಂ ಚಿನ್ನದ ಸರ ಒಳಗೊಂಡಿದ್ದು, ಇತ್ತೀಚೆಗೆ ಕೆನಡಾದ ವಿಶ್ವವಿದ್ಯಾಲಯದಲ್ಲಿ ಜರುಗಿದ ಘಟಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಚೇತನ ಚವ್ಹಾಣ ಅವರು ಮೂಲತ ಗದಗ ಜಿಲ್ಲೆಯ ಸಿಂಗಟರಾಯನಕೇರಿ ತಾಂಡಾದವರಾಗಿದ್ದು,ಇವರು ಮೂಡಬಿದಿರೆ, ಬೆಳಗಾವಿ, ಮಂಗಳೂರು ಮುಂತಾದ ನಗರಗಳಲ್ಲಿ ಶೈಕ್ಷಣಿಕ ಅಧ್ಯಯನ ಪೂರೈಸಿ, ಬಿ.ಇ.ಪದವಿಯನ್ನು ಎನ್ ಐ.ಟಿ ಸೂರತಕಲ್ ನಿಂದ ಪಡೆದುಕೊಂಡು, ಎಂ.ಎಸ್ ಪದವಿಗೆ ಕೆನಡಾಗೆ ಹೆಜ್ಜೆ ಹಾಕಿದ್ದಾರೆ. ಎಂ.ಎಸ್ ಪದವಿಯ ಪ್ರಥಮ ಹಂತದ ಪರೀಕ್ಷೆಯಲ್ಲಿಯ ಅವರ ಈ ಸಾಧನೆಯು ಇತರರಿಗೆ ಸ್ಫೂರ್ತಿಯಾಗಿದ್ದು,ಇವರು ಬೆಳಗಾವಿಯಲ್ಲಿ ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ ಭೀಮಸಿಂಗ್ ಚವ್ಹಾಣ ಅವರ ಪುತ್ರರಾಗಿದ್ದಾರೆ.

Tags:

error: Content is protected !!