ಬೈಲಹೊಂಗಲ ಪಟ್ಟಣದ ತಹಶೀಲ್ದಾರ ಕಚೇರಿ ಆವರಣದ ಸಭಾ ಭವನ ಪಕ್ಕದ ಮರಕ್ಕೆ ಕುಡಿದ ಅಮಲಿನಲ್ಲಿ ಪೊಲೀಸ್ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮುರಕಿಬಾಂವಿ ಗ್ರಾಮದ ಬಸನಗೌಡ ಈರಪ್ಪ ಗೌಡರ (40) ಆತ್ಮಹತ್ಯೆ ಮಾಡಿಕೊಂಡ ಪೇದೆ. ಈ ಪೇದೆ ತಾಲ್ಲೂಕಿನ ದೊಡವಾಡ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಚುನಾವಣೆ ಕರ್ತವ್ಯ ಮುಗಿದ ಮೇಲೆ ರಜೆ ಪಡೆದಿದ್ದರು. ಜೀವನದಲ್ಲಿ ಜಿಗುಪ್ಪೆ ಹೊಂದಿ ಕುಡಿದ ಮತ್ತಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ

